
ಸರಗೂರು: ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ತಾಲ್ಲೂಕು ಘಟಕದ ರೈತ ಮೋರ್ಚಾ ವತಿಯಿಂದ ಸರಗೂರು ಅರಣ್ಯ ವಲಯ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
‘ಒಂದು ತಿಂಗಳಿನಿಂದ ಕಾಡು ಪ್ರಾಣಿಗಳ ದಾಳಿ ಹೆಚ್ಚಾಗಿದ್ದು, ಇದರಿಂದ ಅಪಾರ ಪ್ರಮಾಣದ ಬೆಳೆ ಮತ್ತು ಪ್ರಾಣ ಹಾನಿ ಸಂಭವಿಸಿವೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಎಚ್ಚೆತ್ತುಕೊಳ್ಳದ ಸರ್ಕಾರ ಹುಲಿ, ಚಿರತೆ, ಕಾಡಾನೆಗಳ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಅವರು ಸ್ಪಂದಿಸುತ್ತಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಗೌಡ ಮಾತನಾಡಿ, ‘ವಾರದ ಹಿಂದೆ ಬಡಗಲಪುರ ಗ್ರಾಮದ ರೈತನ ಮೇಲೆ ಹುಲಿ ದಾಳಿಯಿಂದ ಗಾಯಗೊಂಡ ಘಟನೆ ಮಾಸುವ ಮುನ್ನವೇ ಸೋಮವಾರ ಬೆಣ್ಣೇಗೆರೆ ಗ್ರಾಮದ ರೈತ ರಾಜಶೇಖರ್ ಅವರ ಮೇಲೆ ಹುಲಿ ದಾಳಿ ನಡೆಸಿದೆ, ಸಚಿವರ ಗಮನಕ್ಕೆ ಬಂದರೂ ಸ್ಥಳಕ್ಕೆ ಆಗಮಿಸಿದೆ ರೈತರನ್ನು ಕಡೆಗಣಿಸಿದ್ದಾರೆ’ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ, ‘ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಣಿಗಳನ್ನು ತಡೆಗಟ್ಟಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದಾರೆ. ಈ ಸರ್ಕಾರ ಅಧಿಕಾರ ಇರುವುದು ಅಧಿಕಾರಿಗಳಿಗೆ ಮಾತ್ರ. ಸಚಿವ ಈಶ್ವರ್ ಬಿ. ಖಂಡ್ರೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು. ಮನೆಗೆ ಹೋಗಲಿ.ಇಂತಹವರು ಅಧಿಕಾರದಲ್ಲಿದರೆ ಇನ್ನೂ ಸಮಸ್ಯೆ ಎದುರಾಗುತ್ತದೆ.
ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್ ಮಾತನಾಡಿದರು. ಸರಗೂರು ತಾಲ್ಲೂಕು ಮಂಡಳ ಬಿಜೆಪಿ ಅಧ್ಯಕ್ಷ ಕಂದಲಿಕೆ ಗುರುಸ್ವಾಮಿ, ಮಂಡಲ ಅಧ್ಯಕ್ಷ ಶಂಭೇಗೌಡ, ಜಿಲ್ಲಾ ವಕ್ತಾರ ವಸಂತ್ ಕುಮಾರ್, ಜಿಲ್ಲಾ ವಕ್ತಾರ ದಯಾನಂದ ಪಾಟೀಲ್, ಸರಗೂರು ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಶಿವಕುಮಾರ್, ವಿನಾಯಕ ಪ್ರಸಾದ್, ವೀರಭದ್ರಪ್ಪ, ಗಣಪತಿ, ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟಸ್ವಾಮಿ, ಎಚ್.ಸಿ. ಲಕ್ಷ್ಮಣ್, ಸಿ.ಕೆ.ಗಿರೀಶ್, ವೈ.ಟಿ. ಮಹೇಶ್, ಪ್ರಭಾಕರ್ ಜೈನ್, ಚಂದ್ರಶೇಖರ್, ಪರೀಕ್ಷಿತ್ ರಾಜೇ ಅರಸು, ಮಂಜುನಾಥ್, ಮಾದಾಪುರ ನಂದೀಶ್, ಮೊತ್ತ ಬಸವರಾಜಪ್ಪ, ಸೈಯದ್ ಅಕ್ರಮ್ ಪಾಷಾ, ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ಗಂಗಾಧರ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಓಬಿಸಿ ಅಧ್ಯಕ್ಷ ಬಸವರಾಜು, ಯುವ ಮೋರ್ಚಾ ಅಧ್ಯಕ್ಷ ಪೃಥ್ವಿ ಕುಮಾರ್, ವಿವೇಕಾನಂದ, ಗೋಪಾಲಯ್ಯ, ಚೆಲುವಯ್ಯ, ಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.