ADVERTISEMENT

ಮುಳ್ಳುಕಂಟಿಗಳಿಂದ ಮುಚ್ಚಿದ ನಾಲೆ!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 8:15 IST
Last Updated 23 ಫೆಬ್ರುವರಿ 2011, 8:15 IST

ಲಿಂಗಸುಗೂರ:  ತಾಲ್ಲೂಕಿನ ಮಹತ್ವಾ ಕಾಂಕ್ಷಿ ನೀರಾವರಿ ಯೋಜನೆಗಳಲ್ಲಿ ಒಂದಾದ ನವಲಿ-ರಾಂಪೂರ ಜಡಿ ಶಂಕರಲಿಂಗ ಏತ ನೀರಾವರಿ ಯೋಜನೆ ಸದಾ ಒಂದಿಲ್ಲದೊಂದು ಸುದ್ದಿಯಲ್ಲಿರುತ್ತದೆ. ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ನಿರ್ವ ಹಣೆ ಮತ್ತು ಮೇಲುಸ್ತುವಾರಿ ನಿರ್ಲಕ್ಷ್ಯದಿಂದ ರೈತರ ಜಮೀನಿಗೆ ಸಮರ್ಪಕವಾಗಿ ನೀರು ಹರಿಯದೆ ಸದಾ ಸಂಕಷ್ಟ ಎದುರಿಸುವಂತಾಗಿದೆ. ಬಹುತೇಕ ಕಡೆಗಳಲ್ಲಿ ಮುಳ್ಳುಕಂಟಿ ಬೆಳೆದು ನಾಲೆಗಳು ಮುಚ್ಚಿಕೊಂಡಿ ರುವುದು ನಿದರ್ಶನವಾಗಿದೆ.

ತಾಲ್ಲೂಕಿನ ಹಲವು ಗ್ರಾಮಗಳ 28 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕಾಗಿದ್ದ ಈ ಯೋಜನೆ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಪಾಲಿಗೆ ಕಾಮ ಧೇನುವಾಗಿ ಪರಿಣಮಿಸಿದೆ. ಅವೈ ಜ್ಞಾನಿಕ ನಾಲೆಗಳ ನಿರ್ಮಾಣದಿಂದ ಇಳಿಜಾರು ಪ್ರದೇಶದ ಜಮೀನುಗಳಿಗೆ ನೀರು ಹರಿಯದಿರುವ ಬಗ್ಗೆ ಆನೆಹೊಸೂರು, ನಂದಿಹಾಳ, ಬೊಮ್ಮನಾಳ, ನೀರಲಕೇರಿ ಮತ್ತಿತರ ಗ್ರಾಮಗಳ ನೂರಾರು ರೈತರು ಹಿಡಿಶಾಪ ಹಾಕುತ್ತಿದ್ದಾರೆ.

ಮುಖ್ಯ ನಾಲೆ, ವಿತರಣಾ ನಾಲೆ, ಉಪಗಾಲುವೆಗಳು ಬಹುತೇಕವಾಗಿ ಮುಳ್ಳುಕಂಟಿಗಳಿಂದ ಆವೃತಗೊಂಡು ಸರಳವಾಗಿ ನೀರು ಹರಿಯದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಲ್ಯಾಟ ರಲ್ಸ್ ಮತ್ತು ಹೊಲಗಾಲುವೆಗಳು ಕಾಣಸಿಗದಂತಾಗಿದ್ದು ಬಲಿಷ್ಠರು ಮಾತ್ರ ಸ್ವತಃ ಮನಸೋ ಇಚ್ಛೆ ಹೊಲಗಾಲುವೆ ನಿರ್ಮಿಸಿಕೊಂಡಿ ದ್ದರಿಂದ ಸಾಮಾನ್ಯ ರೈತರಿಗೆ ನೀರಾ ವರಿ ಸೌಲಭ್ಯ ಬಿಸಿಲ್ಗುದುರೆಯಾಗಿ ಪರಿಣಮಿಸಿದೆ ಎಂದು ರೈತ ಮುಖಂಡ ಶರಣಪ್ಪ ಆರೋಪಿಸಿದ್ದಾರೆ.

ಮುಖ್ಯ ನಾಲೆಯ ವೀಕ್ಷಣಾ ರಸ್ತೆಗುಂಟ ಮುಳ್ಳುಕಂಟಿ ಬೆಳೆದು ಸಂಚರಿಸಲು ಸಾಧ್ಯವಿಲ್ಲವಾಗಿದೆ. ವಿತರಣಾ ನಾಲೆ ಮತ್ತು ಲ್ಯಾಟ ರಲ್ಸ್‌ಗಳಲ್ಲಿ ಗಿಡಮರಗಳು, ಮುಳ್ಳುಕಂಟಿ ಬೆಳೆದು ಸಂಪೂರ್ಣ ಮುಚ್ಚಿಕೊಂಡಿವೆ. ಮೇಲುಸ್ತುವಾರಿ ಮತ್ತು ನಿರ್ವಹಣೆ ಹೆಸರಿನಲ್ಲಿ ಪ್ರತಿ ವರ್ಷ ಕೋಟ್ಯಂತರ ಹಣ ಖರ್ಚು ಮಾಡುತ್ತಿರುವ ನಿಗಮದ ಹಿರಿಯ ಅಧಿಕಾರಿಗಳು ಪರಿಶೀಲನೆಗೆ ಮುಂದಾಗದೆ ಹೋಗಿದ್ದರಿಂದ ಇಂತಹ ದುಸ್ಥಿತಿ ಬಂದೊದಗಿದೆ ಎಂದು ಹುಲ್ಲಪ್ಪ ನಂದಿಹಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.