ADVERTISEMENT

`ಸ್ಮಾರಕಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ಧಾರಿ'

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:58 IST
Last Updated 7 ಸೆಪ್ಟೆಂಬರ್ 2013, 6:58 IST

ಮಾಗಡಿ: `ದೇಶಕ್ಕೆ ಐತಿಹಾಸಿಕ ಪರಂಪರೆ ಮೆರಗು ನೀಡುತ್ತದೆ' ಎಂದು ಕನಕಪುರ ರೂರಲ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಮುನಿರಾಜಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ನಾವೆಲ್ಲರೂ ಪೂರ್ವಿಕರ ಪರಂಪರೆಯನ್ನು ರಕ್ಷಿಸಬೇಕು. ದೇಶ ಭವ್ಯ ಐತಿಹಾಸಿಕ ಪರಂಪರೆಯನ್ನು ಹೊಂದಿದೆ ಎಂದ ಅವರು, ತಾಲ್ಲೂಕಿನಲ್ಲಿರುವ ಶಿಲಾಶಾಸನಗಳು, ಚಾರಿತ್ರಿಕ ಸ್ಮಾರಕಗಳನ್ನು ರಕ್ಷಿಸಲು ಪ್ರತಿಯ್ಬ್‌ರು ಶ್ರಮಿಸಬೇಕು' ಎಂದರು.

ಇತಿಹಾಸ ಸಂಶೋಧಕ ಡಾ.ಎ.ಕೃಷ್ಣೇಗೌಡ, ಉಪನ್ಯಾಸಕ ಸಂಪಗಿರಾಮಯ್ಯ ಮಾತನಾಡಿದರು.ಇತಿಹಾಸ ಸಂಶೋಧಕ ಚಿಕ್ಕಚಿನ್ನಯ್ಯ, ಉಮಾದೇವಿ, ಪ್ರಭಾಕರ್‌ಮಂಜುನಾಥ್ ಇದ್ದರು. ಉಪನ್ಯಾಸಕ ಬೆಟ್ಟಸ್ವಾಮಿ ಸ್ವಾಗತಿಸಿ, ಚಿತ್ರಕಲಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.