ADVERTISEMENT

ಪಿಯು: ಇಂಗ್ಲಿಷ್‌ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 13:34 IST
Last Updated 17 ಜೂನ್ 2020, 13:34 IST

ರಾಯಚೂರು: ಜಿಲ್ಲೆಯಾದ್ಯಂತ ಜೂನ್‌ 18 ರಂದು ಪದವಿಪೂರ್ವ ದ್ವಿತೀಯ ವರ್ಷದ 19,397 ವಿದ್ಯಾರ್ಥಿಗಳು ಪಿಯು ಇಂಗ್ಲಿಷ್‌ ಪರೀಕ್ಷೆ ಬರೆಯುತ್ತಿದ್ದಾರೆ.

ಒಟ್ಟು 36 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಪ್ರತಿ ಕೇಂದ್ರದಲ್ಲೂ ಕೋವಿಡ್‌ ಸೋಂಕು ತಡೆಗಾಗಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆ ಬರೆಯುವುದಕ್ಕೆ ಬರುವ ಪ್ರತಿ ವಿದ್ಯಾರ್ಥಿಯು ಮಾಸ್ಕ್‌ ಧರಿಸಿರಬೇಕು. ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣೆಗಾಗಿ ಇಬ್ಬರು ಸ್ಟಾಫ್‌ ನರ್ಸ್‌ಗಳನ್ನು ನೇಮಿಸಲಾಗಿದೆ.

ಹೊರಜಿಲ್ಲೆಗಳಲ್ಲಿ ಪಿಯುಸಿ ಓದುತ್ತಿದ್ದ ರಾಯಚೂರಿನ 1,303 ವಿದ್ಯಾರ್ಥಿಗಳು ಸ್ವಗ್ರಾಮಕ್ಕೆ ಬಂದಿದ್ದಾರೆ. ಅವರಿಗೂ ಸಮೀಪದ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ರಾಯಚೂರಿನ ಪಿಯು ಕಾಲೇಜಿನಲ್ಲಿ ಓದುವ ತೆಲಂಗಾಣ ರಾಜ್ಯದ ಕೃಷ್ಣಾದ ಎಂಟು ವಿದ್ಯಾರ್ಥಿಗಳು ಯರಮರಸ್‌ನ ಅಫ್ತಾಬ್‌ ಪಿಯು ಕಾಲೇಜಿನಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ಬರೆಯುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ರಾಯಚೂರಿನಲ್ಲಿ ಓದುವ ಮಂತ್ರಾಲಯದ ಐದು ವಿದ್ಯಾರ್ಥಿಗಳು ನಗರದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆಯುವರು.

ADVERTISEMENT

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಮಧ್ಯೆ ಅಂತರ ಕಾಪಾಡಿಕೊಳ್ಳಲು ಹೆಚ್ಚುವರಿ ಕೋಣೆಗಳನ್ನು ಸಿದ್ಧಗೊಳಿಸಲಾಗಿದೆ. ಈ ಮೊದಲು 622 ಕೋಣೆಗಳು ಸಾಕಾಗುತ್ತಿತ್ತು. ಇದೀಗ 986 ಕೋಣೆಗಳನ್ನು ಪರೀಕ್ಷೆ ಕೋಣೆಗಳಿವೆ. ಪ್ರತಿ ವಿದ್ಯಾರ್ಥಿ ಮಧ್ಯೆ ಮೂರು ಅಡಿ ಅಂತರ ಇರುವಂತೆ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿರುವ 36 ಪರೀಕ್ಷಾ ಕೇಂದ್ರಗಳಲ್ಲಿ ರಾಯಚೂರು ನಗರದಲ್ಲಿ 10, ಮಾನ್ವಿಯಲ್ಲಿ 4, ದೇವದುರ್ಗ 2, ಲಿಂಗಸುಗೂರಿನಲ್ಲಿ 8, ಸಿಂಧನೂರಿನಲ್ಲಿ 8, ಮಸ್ಕಿಯಲ್ಲಿ ಎರಡು, ಹಟ್ಟಿ ಮತ್ತು ಸಿರವಾರದಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.