ADVERTISEMENT

ಮಸ್ಕಿ: 5 ಎ ಕಾಲುವೆ ಅನುಷ್ಠಾನಕ್ಕೆ ಯತ್ನ- ಶಾಸಕ ಆರ್. ಬಸನಗೌಡ

ಶಾಸಕ ಆರ್.ಬಸನಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 11:13 IST
Last Updated 3 ಸೆಪ್ಟೆಂಬರ್ 2021, 11:13 IST
ಆರ್. ಬಸನಗೌಡ
ಆರ್. ಬಸನಗೌಡ   

ಮಸ್ಕಿ: ‘ತಾಲ್ಲೂಕಿನ ಪಾಮನಕೆಲ್ಲೂರು, ಅಂಕುಶದೊಡ್ಡಿ, ವಟಗಲ್, ಅಮಿನಗಡ ಸೇರಿದಂತೆ ವಿವಿಧ ಗ್ರಾಮಗಳ ಬಹುದಿನದ ಬೇಡಿಕೆಯಾಗಿರುವ ನಾರಾಯಣಪೂರ ಬಲದಂಡೆಯ 5 (ಎ) ಕಾಲುವೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ‘ ಎಂದು ಶಾಸಕ ಆರ್. ಬಸನಗೌಡ ಹೇಳಿದರು.

ಪಟ್ಟಣದ ಬಸವೇಶ್ವರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸೆ. 7 ರಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪಕ್ಷದ ವರಿಷ್ಠರ ಗಮನಕ್ಕೆ 5 (ಎ) ಕಾಲುವೆ ಯೋಜನೆ ಜಾರಿ ಬಗ್ಗೆ ಗಮನಕ್ಕೆ ತರಲಾಗುವುದು. ಬರುವ ವಿಧಾನಸಭಾ ಅಧಿವೇಶನದಲ್ಲಿಯೂ ಸಹ ಯೋಜನೆ ಬಗ್ಗೆ ಸರ್ಕಾರದ ಗಮನ ಸೆಳೆಯುವೆ‘ ಎಂದರು.

‘ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಸರ್ವೆ ನಿಲ್ಲಿಸುವಂತೆ ಆ ಭಾಗದ ರೈತರು ಒತ್ತಾಯಿಸಿದ್ದರಿಂದ ಸರ್ವೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಿದ್ದೇನೆಯೇ ಹೊರತು ಯಾವುದೇ ಪತ್ರ ಬರೆದಿಲ್ಲ‘ ಎಂದು ಸ್ಪಷ್ಟಪಡಿಸಿದರು.

ADVERTISEMENT

ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಎರಡು ಅಂಬುಲೈನ್ ಖರೀದಿಸಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆ ಅನುದಾನದಲ್ಲಿ 1 ಅಂಬುಲೈನ್ಸ್ ಖರೀದಿಗೆ ಅನುದಾನ ನೀಡಿದ್ದು ಶೀಘ್ರ ಟೆಂಡರ್ ಕರೆದು ಖರೀದಿಸಲಾಗುವುದು. ಮೂರು ಅಂಬುಲೈನ್ಸ್‌ಗಳನ್ನು ಶೀಘ್ರ ಲೋಕಾರ್ಪಣೆ ಮಾಡಲಾಗುವುದು ಎಂದರು.

ಪಕ್ಷದ ನಗರ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ. ಗ್ರಾಮೀಣ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಮುಖಂಡ ಸಿದ್ದನಗೌಡ ಮಾಟೂರು, ಮೈಬುದಾಬ ಮುದ್ದಾಪೂರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.