ADVERTISEMENT

ಲಯನ್ಸ್‌ ಕ್ಲಬ್‌: ವೃದ್ಧರಿಗೆ ಹೊದಿಕೆ ವಿತರಣೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 13:44 IST
Last Updated 27 ಫೆಬ್ರುವರಿ 2021, 13:44 IST
ರಾಯಚೂರಿನ ಲಯನ್ಸ್ ಕ್ಲಬ್ ಪರವಾಗಿ ಚಲನಚಿತ್ರ ನಟಿ ಪ್ರೇಮಾ ಅವರು ಸ್ಯಾನಿಟರಿ ಪ್ಯಾಡ್ ತಾಜ್ಯ ನಿರ್ವಹಣೆ ಯಂತ್ರವನ್ನು (ಇನ್ಸಿನೆರಟರ್) ನರ್ಸಿಂಗ್‌ ಹಾಸ್ಟೇಲ್‌ ವಿದ್ಯಾರ್ಥಿನಿಯರಿಗಾಗಿ ಶನಿವಾರ ಹಸ್ತಾಂತರಿಸಿದರು
ರಾಯಚೂರಿನ ಲಯನ್ಸ್ ಕ್ಲಬ್ ಪರವಾಗಿ ಚಲನಚಿತ್ರ ನಟಿ ಪ್ರೇಮಾ ಅವರು ಸ್ಯಾನಿಟರಿ ಪ್ಯಾಡ್ ತಾಜ್ಯ ನಿರ್ವಹಣೆ ಯಂತ್ರವನ್ನು (ಇನ್ಸಿನೆರಟರ್) ನರ್ಸಿಂಗ್‌ ಹಾಸ್ಟೇಲ್‌ ವಿದ್ಯಾರ್ಥಿನಿಯರಿಗಾಗಿ ಶನಿವಾರ ಹಸ್ತಾಂತರಿಸಿದರು   

ರಾಯಚೂರು: ನಗರದ ನರ್ಸಿಂಗ್‌ ತರಬೇತಿ ಕೇಂದ್ರದಲ್ಲಿ ರಾಯಚೂರು ಲಯನ್ಸ್‌ ಕ್ಲಬ್‌ನಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಪ್ರೇಮಾ ಅವರು ಭಾಗವಹಿಸಿ, ಕ್ಲಬ್‌ ಪರವಾಗಿ ವಿವಿಧ ನೆರವುಗಳನ್ನು ವಿತರಿಸಿದರು.

ನರ್ಸಿಂಗ್ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಸ್ಯಾನಿಟರಿ ಪ್ಯಾಡ್ ತಾಜ್ಯ ನಿರ್ವಹಣೆ ಯಂತ್ರವನ್ನು ಹಸ್ತಾಂತರಿಸಿದರು. ಆನಂತರ ಹಿರಿಯ ನಾಗರಿಕರಿಗೆ 50 ಕಂಬಳಿಗಳನ್ನು ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿದರು.

ಆನಂತರ ಮಾತನಾಡಿದ ಪ್ರೇಮಾ ಅವರು, ‘ಲಯನ್ಸ್ ಕ್ಲಬ್ ಸಾಮಾಜಿಕ ಕಾರ್ಯಕ್ರಮವು ವಿಶೇಷವಾಗಿದೆ. ಸಾನಿಟರಿ ಪ್ಯಾಡ್ ತಾಜ್ಯ ನಿರ್ವಹಣೆ ಯಂತ್ರವನ್ನು ವಿದ್ಯಾರ್ಥಿನಿಯರು ತಪ್ಪದೇ ಉಪಯೋಗಿಸಬೇಕು. ಶುಚಿತ್ವ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ವೆಂಕಟೇಶ್ ನಾಯಕ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೋನಲ್ ಚೆರ್ಮನ್ ಡಾ. ಸುರೇಶ ಸಗರದ ಅವರು ಲಯನ್ಸ್ ಕ್ಲಬ್ ಕಳೆದ 55 ವರ್ಷಗಳಿಂದ ಸಾಮಾಜಿಕ, ಅರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿರುವ ಸಮಗ್ರ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು.

ಕ್ಲಬ್‌ ಕಾರ್ಯದರ್ಶಿ ನರೇಶ್ ಬಾಬು, ಖಜಾಂಚಿ ಯಮ್ಮಣ್ಣ, ಹನುಮಂತರಾವ್, ಗೋವಿಂದರಾಜ್, ದಿನೇಶ್ ದಸ್ತ್ರಿ , ಡಾ. ಸುರೇಂದ್ರ ಬಾಬು, ಶೆಟ್ಟಿ ನಾಗರಾಜ್, ಮಹದೇವಪ್ಪ, ಪೃತ್ವಿರಾಜ ಗದ್ದಳೆ, ಡಾ. ಜಯಂತಿ ನಾಯಕ, ಕೆ.ಎಂ.ಪಾಟೀಲ, ಬಸವರಾಜ ಗದಗಿನ, ರಾಜೇಂದ್ರ ಕುಮಾರ ಶಿವಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.