ರಾಯಚೂರು: ಮೂರು ದಿನಗಳಿಂದ ಮೋಡಗಳ ಮರೆಯಾಗಿದ್ದ ಸೂರ್ಯ, ಶನಿವಾರ ಸಂಜೆಯಿಂದ ಪ್ರಕಾಶಿಸುತ್ತಿರುವುದು ಜನರಲ್ಲಿ ಸಂತಸ ಮೂಡಿಸಿದೆ.
ಮುಖ್ಯವಾಗಿ ರೈತರ ಆತಂಕ ಕಡಿಮೆಯಾಗಿದೆ. ಹತ್ತಿ ಮತ್ತು ಭತ್ತ ಕೊಯ್ಲು ಮಾಡುತ್ತಿದ್ದ ಕೃಷಿಕರಿಗೆ ಶೀತಗಾಳಿ, ತುಂತುರು ಮಳೆ ಆತಂಕ ಹುಟ್ಟಿಸಿದ್ದವು. ಹುಲುಸಾಗಿ ಬೆಳೆದಿದ್ದ ಬೆಳೆ ಕೈಗೆ ಸಿಗುವ ಬಗ್ಗೆ ಭರವಸೆ ಕಳೆದುಕೊಳ್ಳುವಂತಾಗಿತ್ತು. ಮತ್ತೆ ಸಹಜ ವಾತಾವರಣ ಮರಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.