ADVERTISEMENT

ರಾಯಚೂರು: ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 7:14 IST
Last Updated 21 ಡಿಸೆಂಬರ್ 2025, 7:14 IST
<div class="paragraphs"><p>ರಾಯಚೂರಿನಲ್ಲಿ ಭಾನುವಾರ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಹಾಗೂ ರಾ‌ಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಯಿತು.</p></div>

ರಾಯಚೂರಿನಲ್ಲಿ ಭಾನುವಾರ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಹಾಗೂ ರಾ‌ಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಯಿತು.

   

ರಾಯಚೂರು: ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ ಭಾನುವಾರ ಇಲ್ಲಿಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಹಾಗೂ ರಾ‌ಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಹಿತಿ ಕುಂ. ವೀರಭದ್ರಪ್ಪ ಹಾಗೂ ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ರಾಯಚೂರಿನ ಹೋರಾಟಗಾರ ಬಾಬು ಬಂಡಾರಿಗಲ್ , ಸಾಹಿತಿಗಳಾದ ಬೆಂಗಳೂರಿನ ಪದ್ದಿನಿ ನಾಗರಾಜು, ದೇವದುರ್ಗದ ಚನ್ನಬಸಪ್ಪ ಮಲ್ಕಂದಿನ್ನಿ, ಮೈಸೂರಿನ ಕೆ. ಪಿ.ಮಹಾದೇವ, ಹಂಪಿಯ ಅಮರೇಶ ಯತಗಲ್, ಹಂಪಿಯ ಜೆ. ಪಿ. ದೊಡಮನಿ, ಕಲಬುರಗಿಯ ಸೂರ್ಯಕಾಂತ ಸುಜ್ಞಾತ ಅವರಿಗೆ ರಾಷ್ಟ್ರೀಯ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಲಬುರಗಿಯ ಗಾಯಕ ಸಿದ್ಧಾರ್ಥ ಚಿಮ್ಮಾ ಇದ್ದಾಯಿಗೆ ಬ್ರಹದ್ದೇಶಿ ರಾಷ್ಟ್ರೀಯ ಪ್ರಶಸ್ತಿ, ಲಿಂಗಸುಗೂರಿನ ಭೀಮಣ್ಣ ಹಿರೇನಗನೂರಗೆ ದಲಿತ ಚೇತನ ರಾಷ್ಟ್ರೀಯ ಪ್ರಶಸ್ತಿ, ಶಿವರಾಯ ದೊಡ್ಡಮನಿಗೆ ಮೂಕನಾಯಕ ರಾಷ್ಟ್ರೀಯ ಪ್ರಶಸ್ತಿ, ವಿಜಯಪುರದ ಶಾಂತಾದೇವಿ ಟಿ. ಅವರಿಗೆ ರಮಾಬಾಯಿ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ. ಚಿಕ್ಕಮಗಳೂರಿನ ಬಿ. ಎಂ. ಪುಟ್ಟಯ್ಯಗೆ ಡಾ. ಬಿ. ಆರ್. ಅಂಬೇಡ್ಕರ್ ರತ್ನ ರಾಷ್ಟ್ರೀಯ ಪ್ರಶಸ್ತಿ, ಕೊಡಗಿನ ಸಾಮಾಜಿಕ ಕಾರ್ಯಕರ್ತೆ ಕಾವೇರಿ ಎಚ್.ಎಂ. ಅವರಿಗೆ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿ, ಶ್ರೀ ಚಾಮರಾಜನಗರದ ಚಿತ್ರಕಲಾವಿದ ಮಹಾದೇವ ಎಚ್. ಅವರಿಗೆ ದಲಿತ ಕಲಾ ಸಿರಿ ರಾಷ್ಟ್ರೀಯ ಪ್ರಶಸ್ತಿ, ಸಿಂಧನೂರಿನ ಸಾಹಿತಿ ನರಸಿಂಹಪ್ಪ ರಾಮತ್ನಾಳಗೆ ದಲಿತ ಸಾಹಿತ್ಯ ಸಿರಿ ರಾಷ್ಟ್ರೀಯ ಪ್ರಶಸ್ತಿ ಕೊಡಮಾಡಲಾಯಿತು.

ರಾಷ್ಟ್ರೀಯ ಯುವ ಪ್ರಶಸ್ತಿ:

ವಿಜಯಪುರದ ತ್ರಿವೇಣಿ ಬನಸೋಡೆ , ಬೆಳಗಾವಿಯ ನದೀಮ ಸನದಿ, ಮೈಸೂರಿನ ಮೌಲ್ಯಸ್ವಾಮಿ ಅವರಿಗೆ ಯುವ ದಲಿತ ಸಾಹಿತ್ಯ ಸಿರಿ ರಾಷ್ಟ್ರೀಯ ಪ್ರಶಸ್ತಿ, ಕಲಬುರಗಿಯ ರಜನಿ ತಳವಾರಗೆ ಯುವ ದಲಿತ ಕಲಾಸಿರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಕೋಲಾರದ ಉಮಾ ವೈ. ಜಿ. ಅವರಿಗೆ ಯುವ ದಲಿತ ಗಾನಸಿರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪುಸ್ತಕ ಪ್ರಶಸ್ತಿ:

ರತ್ನಾಕರ ಸಿ ಕುನುಗೋಡು, ಮಲ್ಲಯ್ಯ ಅತ್ತನೂರು, ಶಿವನಾಯಕ ದೊರೆ, ನಂರುಶಿ ಕಡೂರ, ಬಿ.ಶ್ರೀನಿವಾಸ, ಕುಂದೂರು ತಿಮ್ಮಯ್ಯ, ಮಾರುತಿ ದಾಸಣ್ಣವರ, ವೀರೇಶ ಬಡಿಗೇರ, ಪ್ರದೀಪ ಕಡೂನ, ಮುಮ್ತಾಜ್‌ ಬೇಗಂ, ನಿಂಗಪ್ಪ ಮುದೇನೂರು, ಅನಿಲ ಹೊಸಮನಿ, ಸುಭಾಷ ರಜಮಾನೆ, ಮಹೇಶ ಬಳ್ಳಾರಿ, ಮಾಲತೇಶ ಅಂಗೂರು, ಪರಿಮಳ ಎಸ್‌.ಬಿ. ಕೆ.ಪಿ.ಮಹಾಲಿಂಗು, ಸುಧಾ ಹುಚ್ಚಣ್ಣವರ, ಮಲ್ಲಿಕಾರ್ಜುನ ಕಡಕೋಳ, ಸಿದ್ದರಾಮ ಹಿಪ್ಪರಗಿ, ಮೈಲಾರಪ್ಪ ಬೂದಿಹಾಳ, ಶರಣಬಸವ ಬೂದಿಹಾಳ, ಶರಣಬಸವ ಗುಡದಿನ್ನಿ, ಅಮರೇಶ ಗಿಣಿವಾರ, ಛತ್ರಪ್ಪ ತಂಬೂರಿ ಅವರಿಗೆ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.