ADVERTISEMENT

ಆರ್‌ಟಿಪಿಎಸ್‌: ಅಂಬೇಡ್ಕರ್ ಜಯಂತಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 10:59 IST
Last Updated 14 ಏಪ್ರಿಲ್ 2021, 10:59 IST
ಶಕ್ತಿನಗರದ ಆರ್‌ಟಿಪಿಎಸ್ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘದ ಕಚೇರಿಯಲ್ಲಿ ಬುಧವಾರ ಆರ್‌ಟಿಪಿಎಸ್‌, ವೈಟಿಪಿಎಸ್‌ ಅಧಿಕಾರಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಅವರ ಜಯಂತಿ ಆಚರಿಸಿದರು
ಶಕ್ತಿನಗರದ ಆರ್‌ಟಿಪಿಎಸ್ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘದ ಕಚೇರಿಯಲ್ಲಿ ಬುಧವಾರ ಆರ್‌ಟಿಪಿಎಸ್‌, ವೈಟಿಪಿಎಸ್‌ ಅಧಿಕಾರಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಅವರ ಜಯಂತಿ ಆಚರಿಸಿದರು   

ಶಕ್ತಿನಗರ: ‘ವಿಶ್ವದಲ್ಲಿಯೇ ದೇಶಕ್ಕೆ ಮಾದರಿಯಾದ ಸಂವಿಧಾನವನ್ನು ನೀಡಿದ ಮಹಾನ್ ಮಾನವತಾವಾದಿ ಅಂಬೇಡ್ಕರ್‌‘ ಎಂದು ವೈಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಶಶಿಕಾಂತ ಹೇಳಿದರು.

ಆರ್‌ಟಿಪಿಎಸ್ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘದ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಂಬೇಡ್ಕರ್ ಒಂದು ಜಾತಿಗೆ ಸೀಮಿತರಾದವರಲ್ಲ. ಅವರನ್ನು ಎಲ್ಲರೂ ಗೌರವಿಸಿ, ಅವರ ಆದರ್ಶಗಳನ್ನು ವೈಯಕ್ತಿಕ ಬದುಕಿನಲ್ಲಿ ಮೈಗೂಡಿಸಿ ಕೊಳ್ಳಬೇಕು’ ಎಂದರು.

ADVERTISEMENT

ಭೀಮಯ್ಯನಾಯಕ ನಿರೂಪಿಸಿದರು. ಟಿ.ಸೂಗಪ್ಪ ಸ್ವಾಗತಿಸಿದರು. ನಂಜುಂಡಸ್ವಾಮಿ ವಂದಿಸಿದರು.

ಆರ್‌ಟಿಪಿಎಸ್‌ ಸಿವಿಲ್‌ ವಿಭಾಗದ ಮುಖ್ಯ ಎಂಜಿನಿಯರ್ ರಾಜುಮುಡಿ, ವೈಟಿಪಿಎಸ್ ಮುಖ್ಯ ಎಂಜಿನಿಯರ್ ಪ್ರಭುಸ್ವಾಮಿ, ಹಣಕಾಸು ವಿಭಾಗದ ಉಪ ಪ್ರಧಾನ ಪ್ರಬಂಧಕ ಪಿ.ನಿಜೇಂದ್ರ, ಮಾನವ ಸಂಪನ್ಮೂಲ ವಿಭಾಗದ ಉಪ ಪ್ರಬಂಧಕ ರಾಜು, ಕೃಷ್ಣಾರಾಜ್, ಯತಿರಾಜ್, ಎಸ್.ಆರ್.ಕಬಾಡೆ, ಜಯಪ್ರಕಾಶ ಹಾಗೂ ವಿವಿಧ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.