
ಹಟ್ಟಿ ಚಿನ್ನದ ಗಣಿ: ‘ಸನಾತನ ಧರ್ಮ ಉಳಿಯಬೇಕಾದರೆ ದೇಶದಲ್ಲಿ ದೇವಸ್ಧಾನಗಳ ರಕ್ಷಣೆಗೆ ಮುಂದಾಗಬೇಕಾಗಿದೆ’ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.
ಹಟ್ಟಿ ಚಿನ್ನದ ಗಣಿ ಸಮೀಪದ ಗೆಜ್ಜಲಗಟ್ಟಾ ಗ್ರಾಮದಲ್ಲಿ ವೀರನಾಗಮ್ಮ ದೇವಸ್ಧಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆಯ ಮೂರನೇ ದಿನದ ಧರ್ಮಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಧರ್ಮ ಉಳಿವಿಗಾಗಿ ಜಾತಿ ಮರೆತು ಎಲ್ಲರೂ ಒಗಟ್ಟು ಪ್ರದರ್ಶಿಸಬೇಕು. ಈ ದೇಶದಲ್ಲಿ ದೇವಸ್ದಾನಗಳ ರಕ್ಷಣೆ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ದೇವಸ್ಧಾನ, ದೇವರ ಮೂರ್ತಿಗಳಿಗೆ ಕಲ್ಲು ಎಸೆಯುವುದು ಕಂಡುಬಂದರೆ ಸುಮ್ಮನೆ ಕೂಡುವುದಿಲ್ಲ ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಡೆಗೆ ಜನ ಬೇಸತ್ತು ಹೋಗಿದ್ದಾರೆ’ ಎಂದರು.
ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ಈಗಿನ ಯುವಜನರಿಗೆ ಧರ್ಮ ಸಂಸ್ಕೃತಿ ಬಗ್ಗೆ ಪ್ರಜ್ಞೆ ಇಲ್ಲ, ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಜರುಗಿದರೆ ಅವುಗಳು ಉಳಿಯಲಿವೆ’ ಎಂದರು.
ಮಾಜಿ ಸಂಸದ ಬಿ.ವಿ.ನಾಯಕ, ಕೆ.ಕರಿಯಪ್ಪ, ಶಾಸಕ ಮಾನಪ್ಪ ವಜ್ಜಲ್ ಮಾತನಾಡಿದರು.
ಬೆಳಿಗ್ಗೆ ವೀರನಾಗಮ್ಮ ಮೂರ್ತಿಗೆ ಪೂಜಾ ಕಾರ್ಯಕ್ರಮಗಳು ನಡೆದವು.
ಸಂತೆಕೆಲ್ಲೂರು ಗ್ರಾಮದ ಗುರುಬಸವ ಸ್ವಾಮೀಜಿ, ಮಹಾಂತ ಸ್ವಾಮೀಜಿ, ನಿರಂಜನ ಸ್ವಾಮೀಜಿ, ಸೋಮಶೇಖರ ಸ್ವಾಮೀಜಿ, ಶಾಸಕ ಡಾ.ಶಿವರಾಜ ಪಾಟೀಲ, ಗುರುಗುಂಟಾ ಸಂಸ್ಧಾನದ ಸೋಮನಾಥ ನಾಯಕ, ಶರಣಪ್ಪ ಮೇಟಿ, ಬಸವನಗೌಡ ಬ್ಯಾಗವಾಟ, ವೀರನಗೌಡ ಲೆಕ್ಕಿಹಾಳ, ಬಸಮ್ಮ ಯಾದವ, ಗಿರಿಮಲ್ಲನಗೌಡ, ನಾಗಭೂಷಣ, ಗೀರಿಶ, ಮಂಜುನಾಥ, ಕಿರಣ ಉಪಸ್ಧಿತರಿದ್ದರು.
ಹಟ್ಟಿ ಠಾಣೆ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.