ADVERTISEMENT

ಮದುವೆಗಳ ಭರಾಟೆಯ ಕಾರಣಕ್ಕೆ ಬೀನ್ಸ್‌ಗೆ ಬಂತು ಬೇಡಿಕೆ: ನುಗ್ಗೆಕಾಯಿ ಬೆಲೆ ಕುಸಿತ

ಚಂದ್ರಕಾಂತ ಮಸಾನಿ
Published 12 ಫೆಬ್ರುವರಿ 2026, 7:07 IST
Last Updated 12 ಫೆಬ್ರುವರಿ 2026, 7:07 IST
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕ/ ಶ್ರೀನಿವಾಸ ಇನಾಂದಾರ್
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕ/ ಶ್ರೀನಿವಾಸ ಇನಾಂದಾರ್   

ರಾಯಚೂರು: ಮಾರುಕಟ್ಟೆಯಲ್ಲಿ ಎರಡು ವಾರ ತರಕಾರಿ ಬೆಲೆ ಬಹುತೇಕ ಸ್ಥಿರವಾಗಿತ್ತು. ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವ ಕಾರಣ ಈರುಳ್ಳಿ ಬೆಲೆ ತಗ್ಗಿದೆ. ಆದರೆ, ಇದೇ ಅವಧಿಯಲ್ಲಿ ಮದುವೆ ಮುಂಜಿಗಳು ಆರಂಭವಾಗಿರುವ ಕಾರಣ ಕೆಲ ತರಕಾರಿ ಬೆಲೆ ನಿಧಾನವಾಗಿ ಏರ ತೊಡಗಿದೆ.

ಸಾರ್ವಕಾಲಿಕ ಬೇಡಿಕೆ ಇರುವ ಬೆಳ್ಳುಳ್ಳಿ, ‌ಆಲೂಗಡ್ಡೆ, ಬೀಟ್‌ರೂಟ್‌ ಹಾಗೂ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹2 ಸಾವಿರ ಹೆಚ್ಚಾಗಿದೆ.

ಎಲೆಕೋಸು, ಹೂಕೋಸು, ಗಜ್ಜರಿ, ಬದನೆಕಾಯಿ, ಬೆಂಡೆಕಾಯಿ ಬೆಲೆ ಸ್ಥಿರವಾಗಿದೆ. ಡೊಣ ಮೆಣಸಿನಕಾಯಿ, ತುಪ್ಪದ ಹಿರೇಕಾಯಿ, ಸೌತೆಕಾಯಿ ಪ್ರತಿ ಕೆಜಿಗೆ ₹ 60, ಬೀನ್ಸ್, ತೊಂಡೆಕಾಯಿ, ಚವಳೆಕಾಯಿ ಹಾಗೂ ಹಿರೇಕಾಯಿ ಪ್ರತಿ ಕೆಜಿಗೆ ₹ 80 ಆಗಿದೆ. ಪ್ರತಿ ಕೆಜಿಗೆ ₹400 ತಲುಪಿದ್ದ ನುಗ್ಗೆಕಾಯಿ ಬೆಲೆ ಅರ್ಧಕ್ಕೆ ಇಳಿದರೆ, ಟೊಮೆಟೊ ಬೆಲೆ ಕುಸಿದಿದೆ.

ADVERTISEMENT

ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಮೆಂತೆ ಸೊಪ್ಪು ಬಂದಿದೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ಸ್ವಲ್ಪ ಎಲೆಕೋಸು, ಹೂಕೋಸು, ಬದನೆಕಾಯಿ, ಅವರೆಕಾಯಿ ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.

‘ಫೆಬ್ರುವರಿ ಎರಡನೇ ವಾರದವರೆಗೂ ಸ್ವಲ್ಪ ತಂಪಾದ ವಾತಾವರಣ ಇದ್ದ ಕಾರಣ ತರಕಾರಿ ಸಹಜವಾಗಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿತ್ತು. ಇನ್ನು ಬಿಸಿಲು ಗರಿ ಬಿಚ್ಚಿಕೊಳ್ಳುವ ಕಾರಣ ತರಕಾರಿ ಬೆಲೆಯೂ ಏರುಗತಿಯಲ್ಲಿ ಸಾಗಲಿದೆ’ ಎಂದು ತರಕಾರಿ ವ್ಯಾಪಾರಿ ಶಶಿಕುಮಾರ ಹೇಳುತ್ತಾರೆ.

ರಾಯಚೂರು ಮಾರುಕಟ್ಟೆ ತರಕಾರಿ ದರ

ತರಕಾರಿ (ಪ್ರತಿ ಕೆ.ಜಿ);ಕಳೆದ ವಾರ;ಈ ವಾರ (₹ ಗಳಲ್ಲಿ)ಈರುಳ್ಳಿ;20–30;20–25 ಬೆಳ್ಳುಳ್ಳಿ;140-160;160–180 ‌ಆಲೂಗಡ್ಡೆ;30-30;30–40 ಮೆಣಸಿನಕಾಯಿ;40-60;40–60ಎಲೆಕೋಸು;40-60;40-60 ಹೂಕೋಸು;40-60;40-60 ಗಜ್ಜರಿ;40-60;40-60ಬೀಟ್‌ರೂಟ್‌;30–40;40-60 ಬೀನ್ಸ್;60-80;60–80 ಟೊಮೆಟೊ;30-30;10–20 ಬದನೆಕಾಯಿ;40-40;30–40ಹಿರೇಕಾಯಿ;60-60;60–80ಬೆಂಡೆಕಾಯಿ;60-60;40-60ತೊಂಡೆಕಾಯಿ;60-60;70–80ಡೊಣಮೆಣಸಿನಕಾಯಿ;60-80;60–60ತುಪ್ಪದ ಹಿರೇಕಾಯಿ;60-60;40-60ಚವಳೆಕಾಯಿ;50-60;60–80ಸೌತೆಕಾಯಿ;40-60;40-60ನುಗ್ಗೆಕಾಯಿ;200–400;200;200 ಸೊಪ್ಪಿನ ಬೆಲೆ ಸಬ್ಬಸಗಿ;₹20ಕ್ಕೆ 4 ಸಿವುಡು ಮೆಂತೆ; ₹20ಕ್ಕೆ 4 ಸಿವುಡು ಕೊತ್ತಂಬರಿ;₹20ಕ್ಕೆ 5 ಸಿವುಡು ಪಾಲಕ್;₹20ಕ್ಕೆ 4 ಸಿವುಡು|ಪುಂಡಿಪಲ್ಯ; ₹20ಕ್ಕೆ 6 ಸಿವುಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.