ADVERTISEMENT

ಮಸ್ಕಿ: ಭ್ರಮರಾಂಬಾ ದೇವಿ ರಥೋತ್ಸವ ನೆರವೇರಿಸಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 7:12 IST
Last Updated 31 ಅಕ್ಟೋಬರ್ 2020, 7:12 IST
ಮಸ್ಕಿ ಪಟ್ಟಣದ ಭ್ರಮರಾಂಬಾದೇವಿ ರಥೋತ್ಸವ ಸಂಭ್ರಮದಿಂದ ನೆರವೇರಿತು.
ಮಸ್ಕಿ ಪಟ್ಟಣದ ಭ್ರಮರಾಂಬಾದೇವಿ ರಥೋತ್ಸವ ಸಂಭ್ರಮದಿಂದ ನೆರವೇರಿತು.   

ಮಸ್ಕಿ (ರಾಯಚೂರು ಜಿಲ್ಲೆ): ಪಟ್ಟಣದ ಭ್ರಮರಾಂಬಾ ದೇವಿ ರಥೋತ್ಸವವನ್ನು ಸಂಭ್ರಮದಿಂದ ನೆರವೇರಿಸಲಾಯಿತು.

ದೇವಿಯ ಪುರಾಣ ಮಂಗಲೋತ್ಸವ ದಿನ ಶನಿವಾರ, ಸಂಪ್ರದಾಯದಂತೆ ಮಹಿಳೆಯರು ರಥ ಎಳೆದು ಭಕ್ತಿ ಸಮರ್ಪಿಸಿದರು.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇವಿ ಪುರಾಣದ 50ನೇ ವರ್ಷದ ಅದ್ದೂರಿ ಆಚರಣೆಯನ್ನು ಕೈ ಬಿಟ್ಟ ದೇವಸ್ಥಾನದ ಆಡಳಿತ ಮಂಡಳಿಯು ಸರಳವಾಗಿ ಪುರಾಣ ಮಂಗಲೋತ್ಸವ ಆಚರಿಸಿತು.

ADVERTISEMENT

ಪ್ರತಿ ವರ್ಷದಂತೆ ನಡೆಯುತ್ತಿದ್ದ ಜಂಬೂ ಸವಾರಿ, ಸಾವಿರ ಕುಂಭಗಳ ಮೆರವಣಿಗೆ, ವಿವಿಧ ಕಲ ತಂಡಗಳನ್ನು ಈ ಸಾರಿ ಸ್ಥಗಿತಗೊಳಿಸಿ ಕೇವಲ ಐದು ಕುಂಭಗಳು ಹಾಗೂ ಬೆರಳಣಿಕೆಯಷ್ಟು ಭಕ್ತರ ಸಮ್ಮುಖದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು.

ಅಗಸಿ ಮುಂಭಾಗ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಪ್ರಮುಖ ಬೀದಿಗಳ ಮುಖಾಂತರ ಭ್ರಮರಾಂಬಾ ದೇವಸ್ಥಾನಕ್ಕೆ ರಥೋತ್ಸವ ಆಗಮಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.