
ಮಾನ್ವಿ: ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಘಟಕದ ಆವರಣದಲ್ಲಿ ಭಾನುವಾರ ಚಾಲಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಘಟಕದ ವ್ಯವಸ್ಥಾಪಕ ನಾಗರಾಜ ಮಾತನಾಡಿ,‘ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸರ್ಕಾರದ ಶಕ್ತಿ ಯೋಜನೆ, ವಿದ್ಯಾರ್ಥಿಗಳ ಉಚಿತ ಬಸ್‌ಪಾಸ್ ಯೋಜನೆಗಳ ಸೌಲಭ್ಯವನ್ನು ಜನರಿಗೆ ತಲುಪಿಸಲು ಶ್ರಮಿಸುತ್ತಿದ್ದಾರೆ. ಚಾಲಕರು ನಿಗದಿತ ವೇಗದಲ್ಲಿ ರಸ್ತೆಯಲ್ಲಿ ಸುರಕ್ಷಿತವಾಗಿ ಬಸ್ ಚಾಲನೆ ಮಾಡುವುದು ಮುಖ್ಯ’ ಎಂದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ ವಕೀಲ ಮಾತನಾಡಿದರು.
2025–26 ನೇ ಸಾಲಿನಲ್ಲಿ ಸುರಕ್ಷಿತ ಚಾಲನೆಗಾಗಿ ಚಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ಸಿಬ್ಬಂದಿ, ಚಾಲಕರಿಗೆ ಸಿಂಧೂರ ಹಚ್ಚಿ ಆರತಿ ಬೆಳಗಿ ಶುಭ ಕೋರಿದರು.
ಅಶ್ವಿನಿ ಆಸ್ಪತ್ರೆ ವೈದ್ಯೆ ಡಾ.ರಮ್ಯಾ ವೀರವಲ್ಲಿ, ಮಾನ್ವಿ ಪೊಲೀಸ್ ಠಾಣೆಯ ಎಎಸ್ಐ ಮಲ್ಲರೆಡ್ಡಿ, ಸಿರಾಜುದ್ದೀನ್, ಎಂ.ವೈ.ಜಬಲದ್, ಬಸವರಾಜ ಗಡ್ಡಿ, ಚಾಲಕರು, ನಿರ್ವಾಹಕರು, ದುರಸ್ತಿದಾರರು, ನಿಯಂತ್ರಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.