ADVERTISEMENT

ಮಸ್ಕಿ: ಕಟ್ಟೆ ದುರ್ಗಾದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 13:25 IST
Last Updated 2 ಜನವರಿ 2022, 13:25 IST
ಮಸ್ಕಿ ಪಟ್ಟಣದಲ್ಲಿ ಕಟ್ಟೆ ದುರ್ಗಾದೇವಿಯ ರಥೋತ್ಸವ ಭಾನುವಾರ ನಡೆಯಿತು
ಮಸ್ಕಿ ಪಟ್ಟಣದಲ್ಲಿ ಕಟ್ಟೆ ದುರ್ಗಾದೇವಿಯ ರಥೋತ್ಸವ ಭಾನುವಾರ ನಡೆಯಿತು   

ಮಸ್ಕಿ: ಎಳ್ಳ ಅಮಾವಾಸ್ಯೆ ನಿಮಿತ್ತ ಪಟ್ಟಣದ ಕಟ್ಟೆ ದುರ್ಗಾದೇವಿಯ ರಥೋತ್ಸವವು ಭಾನುವಾರ ಸಂಜೆ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ದುರ್ಗಾದೇವಿಯ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ರಥಕ್ಕೆ ಕಳಸಾರೋಹಣ ನೆರವೇರಿಸಲಾಯಿತು. ಭಕ್ತರು ದುರ್ಗಾದೇವಿಗೆ ದೀಡ್ ನಮಸ್ಕಾರ ಹಾಕಿ ಅರಿಕೆ ಸಮರ್ಪಿಸಿದರು.

ಸಂಜೆ ದುರ್ಗಾದೇವಿಯ ಉತ್ಸವ ಮೂರ್ತಿಯನ್ನು ಸೇರಿದ್ದ ಭಕ್ತರ ಜಯಘೋಷಗಳ ನಡುವೆ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ರಥಕ್ಕೆ ಪೂಜೆ ಸಲ್ಲಿಸಿದ ನಂತರ ಮಹಿಳೆಯರು ರಥದ ಮಿಣಿ ಹಿಡಿದು ಎಳೆದರು. ಸಂತೆ ಬಜಾರದ ಪಾದಗಟ್ಟೆವರೆಗೆ ರಥ ಎಳೆದು ವಾಪಾಸು ದುರ್ಗಾದೇವಿಯ ದೇವಸ್ಥಾನಕ್ಕೆ ತರಲಾಯಿತು. ರಥಕ್ಕೆ ಭಕ್ತರು ಉತ್ತುತ್ತಿ ಎಸಿದು ಭಕ್ತಿ ಸಮರ್ಪಿಸಿದರು.

ADVERTISEMENT

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.