ತುರ್ವಿಹಾಳ: ರಸ್ತೆ ದಾಟುವಾಗ ಸಿಲಿಂಡರ್ ತುಂಬಿದ ಲಾರಿಯೊಂದು ಮಗುವಿನ ಮೇಲೆ ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ತುರ್ವಿಹಾಳ ಸಮೀಪದ ಕಲಮಂಗಿ ಮತ್ತು ಊಮಲೂಟಿ ಗ್ರಾಮಗಳ ಮಧ್ಯೆ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಜರುಗಿದೆ.
ಮೃತ ಮಗು ಮಧು ಬಸವರಾಜ ಉರಕಡ್ಲಿ (8) 2ನೇ ತರಗತಿ ಓದುತ್ತಿದ್ದು, ಮೂಲತಃ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದವರಾಗಿದ್ದು, ಸ್ವಗ್ರಾದಿಂದ ಸಿಂಧನೂರು ಕುಷ್ಟಗಿ ಮಾರ್ಗವಾಗಿ ಸೀಮಂತ ಕಾರ್ಯಕ್ರಮದ ನಿಮಿತ್ಯ ಹುಬ್ಬಳ್ಳಿಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಮಧ್ಯಾಹ್ನ ಊಟಕ್ಕಾಗಿ ವಾಹನ ನಿಲ್ಲಿಸಿದಾಗ ಈ ಘಟನೆ ಸಂಭವಿಸಿದೆ. ಈ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಸುಜಾತ.ಡಿ.ಎನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.