ಮುದಗಲ್: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸುರೇಂದ್ರಗೌಡ ಪಾಟೀಲ ಆದಾಪುರ, ಉಪಾಧ್ಯಕ್ಷರಾಗಿ ನಂದಪ್ಪ ಕತ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹೋಳಿಯಮ್ಮ ತಿಳಿಸಿದ್ದಾರೆ.
ಸಂಘಕ್ಕೆ 12 ನಿರ್ದೇಶಕರಿದ್ದು,10 ನಿರ್ದೇಶಕರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸುರೇಂದ್ರಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಂದಪ್ಪ ಕತ್ತಿ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಇದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಘೋಷಿಸಿದರು.
ನಿರ್ದೇಶಕರಾದ ಶಂಬುಲಿಂಗಪ್ಪ ಸುಂಕದ, ಮೋನುದ್ದೀನ್, ನ್ಯಾಮತ್ ಉಲ್ಲಾ ಖಾದ್ರಿ, ಮಹಾಂತೇಶ ಬನ್ನಿಗೋಳ, ಶರಣಮ್ಮ, ಹನಮಪ್ಪ, ಸೋಮಪ್ಪ, ಬಸವರಾಜ ಅಡವಿಬಾವಿ, ನಾಗಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ಶರಣಬಸವ ವ್ಯಾಕರನಾಳ, ಬಸವರಾಜ ಪಾಟೀಲ, ಶಂಕರಾನಂದ, ಮಹಾಂತೇಶ ಗಂಗಾವತಿ, ಮಹ್ಮದ್ ಮುದಾಸಿರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.