ADVERTISEMENT

ಟಿನಿಸ್‌, ಕಬಡ್ಡಿ: ರಾಯಚೂರು ತಂಡಕ್ಕೆ ಟ್ರೋಫಿ

ಅಂತರ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಾಧನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:45 IST
Last Updated 8 ಡಿಸೆಂಬರ್ 2025, 6:45 IST
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಒಳಂಗಾಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತರ ಕಾಲೇಜುಗಳ ಕ್ರೀಡಾಕೂಟದ ಕಬಡ್ಡಿ ಪಂದ್ಯದಲ್ಲಿ ಟ್ರೋಫಿ ಗೆದ್ದ ರಾಯಚೂರಿನ ಕೃಷಿ ಕಾಲೇಜಿನ ತಂಡ
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಒಳಂಗಾಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತರ ಕಾಲೇಜುಗಳ ಕ್ರೀಡಾಕೂಟದ ಕಬಡ್ಡಿ ಪಂದ್ಯದಲ್ಲಿ ಟ್ರೋಫಿ ಗೆದ್ದ ರಾಯಚೂರಿನ ಕೃಷಿ ಕಾಲೇಜಿನ ತಂಡ   

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಣದಲ್ಲಿ ಶನಿವಾರ ನಡೆದ ಅಂತರ ಕಾಲೇಜುಗಳ ಕ್ರೀಡಾಕೂಟದ ಪುರುಷರ ಟೆನಿಸ್‌ ಡಬಲ್ಸ್‌ನಲ್ಲಿ ರಾಯಚೂರಿನ ಪಿಜಿಎಸ್‌ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಕೃಷಿ ಎಂಜಿನಿಯರಿಂಗ್ ಕಾಲೇಜಿನ ತಂಡ ಟ್ರೋಫಿ ಗೆದ್ದುಕೊಂಡಿವೆ.

ಪುರುಷರ ವಿಭಾಗದ ಟೆನಿಸ್‌ ಫೈನಲ್‌ನಲ್ಲಿ ರಾಯಚೂರಿನ ಶ್ರೀನಿವಾಸ ದೀಕ್ಷಿತ, ರವಿತೇಜಾ ಹಾಗೂ ಬೋಧಿಸತ್ವ ನೇತೃತ್ವ ತಂಡ ಭೀಮರಾಯನಗುಡಿ ಕಾಲೇಜಿನ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದುಕೊಂಡಿತು.

ಮಹಿಳೆಯರ ವಿಭಾಗದ ಟೆನಿಸ್‌ ಫೈನಲ್‌ನಲ್ಲಿ ಕೃಷಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಗಂಗಾವತಿಯ ಕೃಷಿ ಕಾಲೇಜಿನ ತಂಡವನ್ನು ಪರಾಭವಗೊಳಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.

ADVERTISEMENT


ಕಬಡ್ಡಿಯಲ್ಲಿ ರಾಯಚೂರು ತಂಡಕ್ಕೆ ಜಯ: ಅಂತರ ಕಾಲೇಜುಗಳ ಕ್ರೀಡಾಕೂಟದ ಕಬಡ್ಡಿ ಫೈನಲ್‌ನಲ್ಲಿ ರಾಯಚೂರಿನ ಕೃಷಿ ಕಾಲೇಜು ತಂಡವು ಗಂಗಾವತಿಯ ಕೃಷಿ ಕಾಲೇಜಿನ ತಂಡವನ್ನು 39–11ಅಂಕಗಳಿಂದ ಸೋಲಿಸಿ ವಿಜಯ ಪತಾಕೆ ಹಾರಿಸಿತು.

ಸೆಮಿಫೈನಲ್‌ನಲ್ಲಿ ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ತಂಡವು ಗಂಗಾವತಿಯ ತಂಡದ ಎದುರು ಸೋಲನುಭವಿಸಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಭೀಮರಾಯನಗುಡಿಯ ತಂಡವು ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ತಂಡವನ್ನು ಸೋಲಿಸಿ ಫೈನಲ್‌ ಪ್ರವೇಶ ಮಾಡಿತು.

ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ಡೀನ್ ಎಂ.ಎಸ್.ಅಯ್ಯನಗೌಡರ, ಕೃಷಿ ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರಾಜಣ್ಣ ಬಹುಮಾನ ವಿತರಿಸಿದರು.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಒಳಂಗಾಣ ಕ್ರೀಡಾಂಗಣದಲ್ಲಿ ನಡೆದ ಅಂತರ ಕಾಲೇಜುಗಳ ಕ್ರೀಡಾಕೂಟದ ಟೆನಿಸ್‌ ಡಬಲ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ವಿಜೇತರಿಗೆ ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ಡೀನ್ ಎಂ.ಎಸ್.ಅಯ್ಯನಗೌಡರ ಕೃಷಿ ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರಾಜಣ್ಣ ಬಹುಮಾನ ವಿತರಿಸಿದರು. ಸುಧಾರಾಣಿ ಶಗುಪ್ತಾ ಪಲ್ಲವಿ ಶಾಂತಮ್ಮ ಝಪಾ ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.