ಸಿರವಾರ: ಪಟ್ಟಣದ ಪಟ್ಟಣ ಪಂಚಾಯಿತಿಯ 12ನೇ ವಾರ್ಡ್‌ನ ಉಪಚುನಾವಣೆ ಫಲಿತಾಂಶ ಬುಧವಾರ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಎಸ್.ದಾನನಗೌಡ 324 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.
ಸದಸ್ಯೆಯ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಆ.17 ರಂದು ಉಪಚುನಾವಣೆ ನಡೆದಿತ್ತು.
522 ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ 324, ಬಿಜೆಪಿ ಅಭ್ಯರ್ಥಿ ಹುಸೇನಮ್ಮ 111, ಜೆಡಿಎಸ್ ಅಭ್ಯರ್ಥಿ ಮಾಳಮ್ಮ ಹನುಮಂತ 86 ಮತ ಪಡೆದರೆ, ನೋಟಾಗೆ ಒಂದು ಮತ ಚಲಾವಣೆಯಾಗಿದೆ.
ವಿಜೇತ ಅಭ್ಯರ್ಥಿಗೆ ತಹಶೀಲ್ದಾರ್ ಅಶೋಕ ಪವಾರ್ ಪ್ರಮಾಣ ಪತ್ರ ನೀಡಿದರು.
ಸಂಭ್ರಮಾಚರಣೆ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜ್ಯೋತಿ ಗೆಲುವು ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಮುಖಂಡರಾದ ಪ.ಪಂ ಅಧ್ಯಕ್ಷ ವೈ.ಭೂಪನಗೌಡ, ಬ್ರಿಜೇಶ್ ಪಾಟೀಲ, ರಮೇಶ ದರ್ಶನಕರ್, ಎಂ.ನಿಂಬಯ್ಯ ಸ್ವಾಮಿ, ಎಸ್.ದಾನನಗೌಡ, ಮಲ್ಲಿಕಾರ್ಜುನ ಹೂಗಾರ, ಚಿನ್ನಾನ ನಾಗರಾಜ, ಪ.ಪಂ ಸದಸ್ಯರಾದ ಹಾಜಿ ಚೌದ್ರಿ, ಹಸೇನಲಿ, ಸೂರಿ ದುರುಗಣ್ಣ, ಮೌಲಾಸಾಬ್ ವರ್ಚಸ್, ಎಚ್. ಮಾರ್ಕಪ್ಪ, ಮುಖಂಡರಾದ ನಾಗೋಲಿ ಚನ್ನಪ್ಪ, ವೀರೇಶ ಗಡ್ಲ, ಮೆಶಾಕ್ ದೊಡ್ಮನಿ, ಕರಿಯಪ್ಪ, ಚಂದ್ರಶೇಖರ ಹಡಪದ, ವೆಂಕಟೇಶ ದೊರೆ, ನಾಗರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.