ADVERTISEMENT

ರಾಯಚೂರು | ಇಂಧನ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 12:49 IST
Last Updated 29 ಜೂನ್ 2020, 12:49 IST
   

ರಾಯಚೂರು: ಪೆಟ್ರೊಲ್, ಡೀಸೆಲ್ ದರ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರದ ವಿರುದ್ಧ ಮುಖಂಡರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಮಾತನಾಡಿ, ಬಿಜೆಪಿ ಅಧಿಕಾರ ಬಂದಾಗಿನಿಂದ ಪೆಟ್ರೊಲ್, ಡಿಸೆಲ್ ದರ ಏರಿಕೆ ಮಾಡುತ್ತಿದೆ. ಕೊರೊನಾ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಲ್ಲ. 2014 ರಿಂದ ಇಂದಿನವರೆಗೆ ದರ ₹ 25 ಏರಿಸಲಾಗಿದೆ ಎಂದು ದೂರಿದರು.

ADVERTISEMENT

ದರ ಏರಿಕೆಯಿಂದ ಜನಸಾಮಾನ್ಯರ ಮೇಲೆ ಆರ್ಥಿಕ ಭಾರ ಆಗುತ್ತಿದೆ. ಕೇವಲ ಆರ್ಥಿಕ ಖಜಾನೆ ತುಂಬಿಸಿಕೊಳ್ಳಲು ದರ ಏರಿಕೆಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಮುಖಂಡರಾದ ಕೆ.ಶಾತಪ್ಪ, ಬಸವರಾಜ ರೆಡ್ಡಿ, ಅಮರೇಗೌಡ ಹಂಚಿನಾಳ, ಎ.ವಸಂತಕುಮಾರ, ಹಂಪನಗೌಡ ಬಾದರ್ಲಿ, ಯಂಕಣ್ಣ ಯಾದವ್, ಅಸ್ಲಂ. ಪಾಶ, ಸಾಜೀದ್ ಸಮೀರ್, ನಿರ್ಮಲಾ ಬೆಣ್ಣೆ, ರಾಣಿ ರಿಚರ್ಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.