ADVERTISEMENT

ಪತಿಯ ಕೋವಿಡ್ ಪರಿಹಾರ ಹಣಕ್ಕಾಗಿ ಪತ್ನಿ ಪರದಾಟ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 15:25 IST
Last Updated 9 ಜೂನ್ 2023, 15:25 IST
 ಕೊವಿಡ್‍ನಿಂದ ಮೃತಪಟ್ಟ ಪತಿ ಕೊರೋನಾ ವಾರಿಯರ್ ಪರಿಹಾರ ಹಣಕ್ಕಾಗಿ ಮೃತನ ಪತ್ನಿರಾಯಚೂರಿನ ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು.
 ಕೊವಿಡ್‍ನಿಂದ ಮೃತಪಟ್ಟ ಪತಿ ಕೊರೋನಾ ವಾರಿಯರ್ ಪರಿಹಾರ ಹಣಕ್ಕಾಗಿ ಮೃತನ ಪತ್ನಿರಾಯಚೂರಿನ ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು.   

ರಾಯಚೂರು: ಕೋವಿಡ್‍ನಿಂದ ಮೃತಪಟ್ಟ ಪತಿಯ ಪರಿಹಾರ ಹಣಕ್ಕಾಗಿ ಅತ್ತೆ-ಸೊಸೆ ನಡುವೆ ಸಂಘರ್ಷ ನಡೆದಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಮೃತನ ಪತ್ನಿ ನ್ಯಾಯ ಒದಗಿಸಿಕೊಡಬೇಕು ಎಂದು ಗುರುವಾರ ಕಣ್ಣೀರಿಟ್ಟರು ಪ್ರಸಂಗ ನಡೆದಿದೆ.

ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್)ಬೋಧಕ ಆಸ್ಪತ್ರೆಯಲ್ಲಿ ಸಂಶೋಧನಾ ವಿಜ್ಞಾನಿಯಾಗಿದ್ದ ಲೋಹಿತ್.ಜಿ.ಕೆ ಅವರು ಕೊವಿಡ್‍ಗೆ ಬಲಿಯಾಗಿದ್ದರು.

ಕೊರೊನಾ ವಾರಿಯರ್‌ಗೆ ಸರ್ಕಾರದಿಂದ ಮಂಜೂರಾಗಿರುವ ₹50 ಲಕ್ಷ ಪರಿಹಾರ ಮೊತ್ತವನ್ನು ನನಗೆ ನೀಡದೇ ಗಂಡನ ತಾಯಿ (ಅತ್ತೆ) ಮಂಜುಳಾ.ಕೆ ಅವರಿಗೆ ನೀಡಲು ನಿರ್ಧರಿಸಿರುವುದಕ್ಕೆ ಪತ್ನಿ ಮಂಜುಳಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ADVERTISEMENT

’ರಿಮ್ಸ್ ಅಧಿಕಾರಿಗಳು ಪರಿಹಾರದ ಹಣವನ್ನು ಪತಿಯ ತಾಯಿಗೆ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತ, ರಿಮ್ಸ್‌ನ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಕ್ಯಾರೇ ಎನ್ನುತ್ತಿಲ್ಲ. ಯಾವುದೇ ಕಾರಣಕ್ಕೂ ಪರಿಹಾರವನ್ನು ಅತ್ತೆಗೆ ನೀಡಬಾರದು’ ಎಂದು ಪತ್ನಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.