ADVERTISEMENT

ಕೋವಿಡ್‌: ಆರೋಗ್ಯ ತಪಾಸಣೆ ಹೆಚ್ಚಲಿ

ಎಲ್ಲರೂ ಸ್ವಯಂ ನಿಯಂತ್ರಣ ಕ್ರಮ ಅನುಸರಿಸದಿದ್ದರೆ ಸಂಕಷ್ಟ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 19 ಏಪ್ರಿಲ್ 2021, 4:23 IST
Last Updated 19 ಏಪ್ರಿಲ್ 2021, 4:23 IST
ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‍ ವೈದ್ಯಕೀಯ ಪರೀಕ್ಷೆಗೆ ಸರದಿ ಸಾಲಿನಲ್ಲಿ ನಿಂತಿರುವ ಜನರು
ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‍ ವೈದ್ಯಕೀಯ ಪರೀಕ್ಷೆಗೆ ಸರದಿ ಸಾಲಿನಲ್ಲಿ ನಿಂತಿರುವ ಜನರು   

ಲಿಂಗಸುಗೂರು: ಕೋವಿಡ್‍ ಕೇರ್‍ ಕೇಂದ್ರಗಳ ಸ್ಥಾಪನೆ, ಕಾಂಟೋನ್ಮೆಂಟ್‌ ಪ್ರದೇಶ ಗುರುತಿಸುವ, ಹೊರ ರಾಜ್ಯಗಳಿಂದ ಬರುವವರ ಆರೋಗ್ಯ ತಪಾಸಣೆ ತಾಲ್ಲೂಕಿನಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ.

ಕೋವಿಡ್‍ ಪ್ರಕರಣ ಹೆಚ್ಚುತ್ತಿರು ವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಒಂದು ತಿಂಗಳಲ್ಲಿ 96 ಕೋವಿಡ್‍ ದೃಢ ಪ್ರಕರಣಗಳು ವರದಿ ಆಗಿವೆ. ಬಹುತೇಕ ಕೋವಿಡ್‍ ಶೋಂಕಿತರು ಹೊರಗಡೆಯಿಂದ ಬಂದು ಹೋದವರೆ ಹೆಚ್ಚಾಗಿದ್ದಾರೆ. ಅವರ ಪ್ರಾಥಮಿಕ
ಮತ್ತು ದ್ವಿತೀಯ ಸಂಪರ್ಕ ಹೊಂದಿ ದವರ ಹಿಸ್ಟರಿ ಕಲೆ ಹಾಕುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಕೋವಿಡ್‍ ಸೋಂಕಿಗೆ ಒಳಗಾ ದವರ ಆರೋಗ್ಯ ಸುರಕ್ಷತೆಗೆ ಕೋವಿಡ್‍ ಕೇರ್‍ ಕೇಂದ್ರಗಳನ್ನು ಆರಂಭಿಸಿಲ್ಲ. ಮನೆಗಳಲ್ಲಿಯೆ
ಇರುವಂತೆ ಸೂಚಿಸಲಾಗಿದೆ. ಹೆಚ್ಚಿನ ಲಕ್ಷಣಗಳು ಕಂಡು ಬಂದವರನ್ನು ಮಾತ್ರ ಹೆಚ್ಚುವರಿ ಚಿಕಿತ್ಸೆಗೆ ರಾಯಚೂರು ರಿಮ್ಸ್, ಓಪೆಕ್‍ ಆಸ್ಪತ್ರೆಗಳಿಗೆ ಕಳುಹಿಸುತ್ತಿದೆ.

ADVERTISEMENT

ಈ ಮುಂಚೆ ಕೋವಿಡ್‍ ಪ್ರಕರಣ ವರದಿ ಆದ ತಕ್ಷಣ ಶೋಂಕಿತ ಮನೆಗೆ ಬ್ಯಾರಿಕೇಡ್‍ ಹಾಕಿ, ರಾಸಾಯನಿಕ ಸಿಂಪಡಣೆ ಮಾಡಿ ಆ ಪ್ರದೇಶವನ್ನು ಕಾಂಟೋನ್ಮೆಂಟ್‌ ಪ್ರದೇಶ ಎಂದು ಘೋಷಿಸಲಾಗುತ್ತಿತ್ತು. ಶೋಂಕಿತರನ್ನು ಕೋವಿಡ್‍ ಕೇರ್‍ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗುತ್ತಿತ್ತು.

‘ಕಳೆದ ಮಾರ್ಚ್‌ 20 ರಿಂದ ಈವರೆಗೆ 4726 ಜನರ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ ಮಾಡಿದ್ದೇವೆ. ಒಂದು ತಿಂಗಳ ಅವಧಿಯಲ್ಲಿ 96 ಕೋವಿಡ್‍ ಪ್ರಕರಣಗಳು ವರದಿ ಬಂದಿವೆ. ಸಾಮಾನ್ಯ ಲಕ್ಷಣಗಳು ಇದ್ದವರನ್ನು ಮನೆಯಲ್ಲಿಯೆ ಕ್ವಾರಂಟೈನ್‍ ಮಾಡಲಾಗುತ್ತಿದೆ’ ಎಂದು ಕೋವಿಡ್‍ ತಾಲ್ಲೂಕು ನೋಡಲ್‍ ಅಧಿಕಾರಿ ಉಪ್ಪಳಪ್ಪ ತಿಳಿಸಿದರು.

‘ ಕೋವಿಡ್‍ ಪ್ರಕರಣಗಳು ಹೆಚ್ಚಳ ವಾಗಿದ್ದು, ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಕೆಲಸ ಮಾಡುತ್ತಿದ್ದೇವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಮಾಕಾಪುರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.