ADVERTISEMENT

ದಾಸಾಮೃತ ಸಂಗೀತ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 15:38 IST
Last Updated 21 ಆಗಸ್ಟ್ 2021, 15:38 IST
ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ ಶನಿವಾರದಿಂದ ಆರಂಭವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜಗದೀಶ ಆಚಾರ್ಯ ಮತ್ತು ತಂಡದವರು ದಾಸಾಮೃತ ಸಂಗೀತ ಕಾರ್ಯಕ್ರಮ ನೀಡಿದರು
ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ ಶನಿವಾರದಿಂದ ಆರಂಭವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜಗದೀಶ ಆಚಾರ್ಯ ಮತ್ತು ತಂಡದವರು ದಾಸಾಮೃತ ಸಂಗೀತ ಕಾರ್ಯಕ್ರಮ ನೀಡಿದರು   

ರಾಯಚೂರು: ಮಂತ್ರಾಲಯದಲ್ಲಿ 350ನೇ ರಾಯರ ಆರಾಧನಾ ಮಹೋತ್ಸವದ ಮೊದಲ ದಿನ ಶನಿವಾರ ಸಂಜೆ ದಾಸಾಮೃತ ಸಂಗೀತ ಕಾರ್ಯಕ್ರಮವು ಪ್ರಧಾನ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲೆಯ ತುಳುನಾಡಿನ ಗಾನಮಾಂತ್ರಿಕ ಜಗದೀಶ ಆಚಾರ್ಯ ಪುತ್ತೂರು ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನೀಡಿದರು.

ವಿಡಿಯೋ ಧ್ವನಿ ಸುರುಳಿ ನಾಳೆ: ಶ್ರೀರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದಿಂದ ನಿರ್ಮಿಸಿರುವ ಸಾಹಿತಿ ದಿ.ಬೆಳಗೆರೆ ಮಹಾಲಕ್ಷ್ಮಮ್ಮ ಅವರು ರಚಿಸಿದ ‘ಆರಾಧನೆ ಭಕ್ತಿ ಆರಾಧನೆ’ ವಿಡಿಯೋ ಧ್ವನಿ ಸುರುಳಿಯನ್ನು ಮಂತ್ರಾಲಯದ ಪ್ರಧಾನ ಸಾಂಸ್ಕೃತಿಕ ವೇದಿಕೆಯಲ್ಲಿ ಆಗಸ್ಟ್‌ 23 ರಂದು ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಬಿಡುಗಡೆಗೊಳಿಸುವರು.

ADVERTISEMENT

ಸಂಗೀತ ವಿದ್ವಾನ್‌ ಜಗದೀಶ ಪುತ್ತೂರು ಅವರು ಸಂಗೀತಗಾಯನ ಮತ್ತು ನಿರ್ದೇಶನ ಮಾಡಿದ್ದು, ಶ್ರೀರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಅಧ್ಯಕ್ಷೆ ಗೌರಿ ನಾಗರಾಜ ನಿರ್ಮಾಣ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದಿಂದ ಮಠದ ಪೀಠಾಧಿಪತಿಗಳಿಗೆ ‘ಗುರುವಂದನಾ ಕಾರ್ಯಕ್ರಮ’ ನಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.