ADVERTISEMENT

ಯಾದಗಿರಿ ಪಿಎಸ್‍ಐ ಪರಶುರಾಮ ಸಾವಿನ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 13:10 IST
Last Updated 8 ಆಗಸ್ಟ್ 2024, 13:10 IST
ಲಿಂಗಸುಗೂರಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರು ಯಾದಗಿರಿ ಪಿಎಸ್ಐ ಪ್ರಕರಣ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿ ಗದ್ದೆಪ್ಪ ಕಲಬುರ್ಗಿ ಅವರಿಗೆ ಮನವಿ ಸಲ್ಲಿಸಿದರು
ಲಿಂಗಸುಗೂರಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರು ಯಾದಗಿರಿ ಪಿಎಸ್ಐ ಪ್ರಕರಣ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿ ಗದ್ದೆಪ್ಪ ಕಲಬುರ್ಗಿ ಅವರಿಗೆ ಮನವಿ ಸಲ್ಲಿಸಿದರು   

ಲಿಂಗಸುಗೂರು: ಯಾದಗಿರಿ ಪಿಎಸ್‍ಐ ಪರಶುರಾಮ ಸಾವಿನ ವಾಸ್ತವ ಸತ್ಯ ಬಯಲುಗೊಳಿಸಲು ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಆಗ್ರಹಿಸಿದೆ.

ಗುರುವಾರ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿ ಗದ್ದೆಪ್ಪ ಕಲಬುರ್ಗಿ ಮೂಲಕ ಮನವಿ ಸಲ್ಲಿಸಿ, ಶಾಸಕ ಮತ್ತು ಪುತ್ರರ ಮಾನಸಿಕ ಕಿರುಕುಳ ತಾಳದೆ ಮೃತಪಟ್ಟಿರುವುದು ಬಹಿರಂಗವಾಗಿದೆ. ಈ ಕುರಿತು ವಾಸ್ತವ ತನಿಖೆ ನಡೆಸುವ ಜೊತೆಗೆ ತಕ್ಷಣವೇ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಸಿಐಡಿ ತನಿಖೆ ಮೇಲೆ ಸಂಶಯ ಹುಟ್ಟಿಕೊಂಡಿದೆ. ಕಾರಣ ಸಿಬಿಐಗೆ ತನಿಖೆಗೆ ಒಳಪಡಿಸಿ, ಪರಶುರಾಮ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು. ಕುಟುಂಬಸ್ಥರಿಗೆ ₹2 ಕೋಟಿ ಪರಿಹಾರ ಘೋಷಿಸಬೇಕು. ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಮನವಿಯಲ್ಲಿ ತಿಳಿಸಿದರು.

ADVERTISEMENT

ತಾಲ್ಲೂಕು ಸಂಚಾಲಕ ಯಮನಪ್ಪ ಚಲುವಾದಿ, ಮುಖಂಡರಾದ ಯಂಕಪ್ಪ ಚಲುವಾದಿ, ನಾಗರಾಜ ಹಾಲಭಾವಿ, ಮೌನೇಶ ಗುಡದನಾಳ, ಶಿವಕುಮಾರ ಸಂತೆಕೆಲ್ಲೂರು, ದುರುಗಪ್ಪ ಸಂತೆಕೆಲ್ಲೂರು, ಸೋಮಣ್ಣ ಚಿತ್ತಾಪುರ, ಚಿಂತಾಮಣಿ ಚಿತ್ತಾಪುರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.