
ದೇವದುರ್ಗ: ಪಟ್ಟಣದ ವಿವಿಧೆಡೆ ಬಿಡಾಡಿ ಜಾನುವಾರುಗಳು ರಸ್ತೆ ಮಧ್ಯದಲ್ಲಿ ಮಲಗುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಪಟ್ಟಣದ ಹೊಸ ಬಸ್ ನಿಲ್ದಾಣ, ಎಪಿಎಂಸಿ ಬಳಿ, ಟಿಎಪಿಎಂಸಿ, ಹಳೆ ಬಸ್ ನಿಲ್ದಾಣ, ನಗರಗುಂಡ ಮತ್ತು ಅಂಬೇಡ್ಕರ್ ವೃತ್ತದ ಬಳಿ ಜಾನುವಾರುಗಳು ರಸ್ತೆ ಮಧ್ಯದಲ್ಲಿ ಮಲಗುತ್ತಿವೆ. ಇದರಿಂದ ಅಪಘಾತಗಳು ಸಂಭ ವಿಸುತ್ತಿವೆ.
ತರಕಾರಿ ಅಂಗಡಿ ಮಾಲೀಕರು ಕೊಳೆತ ತರಕಾರಿ ರಸ್ತೆಗೆ ಎಸೆಯುವುದರಿಂದ ರಸ್ತೆ ಮೇಲೆ ಬಿಡಾರ ಹೂಡಿವೆ. ರಸ್ತೆಯಲ್ಲಿ ಮಲಗಿಕೊಂಡು ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತವೆ. ಕೆಲವೆಡೆ ರಸ್ತೆ ಮಧ್ಯದಲ್ಲಿ ನಿಂತು ಎಷ್ಟು ಹಾರ್ನ್ ಮಾಡಿದರೂ ಕದಲುವುದಿಲ್ಲ. ಇದರಿಂದ ವಾಹನ ಸವಾರರು ಕೆಳಗೆ ಇಳಿದು ಓಡಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ವಿಭಜದ ಮೇಲೆ ಮಲಗಿಕೊಂಡು ದಿಢೀರನೆ ಎದ್ದು ವಾಹನ ಸವಾರರು ಗೊಂದಲಕ್ಕೀಡಾಗುವಂತೆ ಮಾಡುತ್ತವೆ. ಮೈಮರೆತರೆ ನೇರವಾಗಿ ವಾಹನಗಳಿಗೆ ಡಿಕ್ಕಿ ಹೊಡೆಯುತ್ತವೆ.
ಈ ಜಾನುವಾರುಗಳು ರಸ್ತೆ ಬದಿ ಎಸೆದ ತ್ಯಾಜ್ಯವನ್ನು ಸೇವಿಸುತ್ತವೆ. ಆ ಬದಿ ರಸ್ತೆಯಿಂದ ಈ ಬದಿ ರಸ್ತೆವರೆಗೆ ಯಾವುದೇ ಆತಂಕವಿಲ್ಲದೆ ರಸ್ತೆ ದಾಟುತ್ತವೆ. ವಾಹನ ಸವಾರರು ಇದರಿಂದ ಕೊಂಚ ಮೈಮರೆತರೂ ಆಸ್ಪತ್ರೆ ಸೇರುವುದು ಗ್ಯಾರಂಟಿ.
ಜಾನುವಾರುಗಳು ರಸ್ತೆ, ಪಾದಚಾರಿ ಮಾರ್ಗದಲ್ಲಿ ಸಗಣಿ ಹಾಕುತ್ತವೆ. ಪಾದಚಾರಿಗಳು ನಡೆದಾಡಲು ತೊಂದರೆ ಪಡುವಂತಾಗಿದೆ. ಹೊಸ ಬಸ್ ನಿಲ್ದಾಣದ ಹತ್ತಿರ, ಸಂಚಾರ ಪೊಲೀಸ್ ಠಾಣೆಯ ಪೊಲೀಸರೇ ಬಡಗಿ ಹಿಡಿದು ಜಾನುವಾರುಗಳನ್ನು ಕಾಯುವ ಪರಿಸ್ಥಿತಿ ಎದುರಾಗಿದೆ. ಪುರಸಭೆಯವರು ಎಮ್ಮೆ ಮತ್ತು ದನಗಳ ಮಾಲೀಕರಿಗೆ ಸೂಚನೆ ನೀಡಿ ರಸ್ತೆಗೆ ಬಿಡದಂತೆ ಕ್ರಮ ಕೈಗೊಳ್ಳಬೇಕು. ರಸ್ತೆಗೆ ಬಿಟ್ಟಲ್ಲಿ ಅವುಗಳನ್ನು ಗೋಶಾಲೆಗೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.Quote - ರಸ್ತೆ ಮೇಲೆ ಜಾನುವಾರುಗಳು ಮಲಗಿಕೊಳ್ಳುವುದರಿಂದ ಆಂಬುಲೆನ್ಸ್ ಮತ್ತು ಬಸ್‌ಗಳಿಗೆ ಹೆಚ್ಚಿನ ತೊಂದರೆ ಆಗುತ್ತಿದೆ ಜಿ.ಬಸವರಾಜ ನಾಯಕ ಹಿರಿಯ ಹೋರಾಟಗಾರ
ರಸ್ತೆ ಮೇಲೆ ಬಿಡಾರ ಹೂಡಿದ ಜಾನುವಾರುಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಗೋಶಾಲೆಗೆ ಸಾಗಿಸಲು ಕ್ರಮ ವಹಿಸುವಂತೆ ತಿಳಿಸುವೆಮಂಜುನಾಥ.ಎಸ್ ಪಿಐ ದೇವದುರ್ಗ ಪೊಲೀಸ್ ಠಾಣೆ
ರಸ್ತೆಗೆ ಜಾನುವಾರುಗಳನ್ನು ಬಿಡದಂತೆ ಕಸ ವಿಲೇವಾರಿ ವಾಹನಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಒಂದು ವಾರದ ನಂತರ ರಸ್ತೆ ಮೇಲಿರುವ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸಲು ಕ್ರಮ ವಹಿಸುತ್ತೇವೆಹಂಪಯ್ಯ.ಕೆ ಪುರಸಭೆ ಮುಖ್ಯಾಧಿಕಾರಿ
Quote - ರಸ್ತೆ ಮೇಲೆ ಜಾನುವಾರುಗಳು ಮಲಗಿಕೊಳ್ಳುವುದರಿಂದ ಆಂಬುಲೆನ್ಸ್ ಮತ್ತು ಬಸ್‌ಗಳಿಗೆ ಹೆಚ್ಚಿನ ತೊಂದರೆ ಆಗುತ್ತಿದೆಜಿ.ಬಸವರಾಜ ನಾಯಕ ಹಿರಿಯ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.