ದೇವದುರ್ಗ: ತಾಲ್ಲೂಕಿನ ವಿವಿಧ ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಮಾಧವನಂದ ತಿಳಿಸಿದ್ದಾರೆ.
ಮಾಗಿಹೊಲದದೊಡ್ಡಿ (ಮಿನಿಕೇಂದ್ರ) (ಎಸ್ಟಿ), ಕೆಂಪಮರಸಿತಾಂಡ (ಮಿನಿಕೇಂದ್ರ) (ಎಸ್ಸಿ), ಎ.ಜಿ.ಕಾಲೊನಿ–1 (ಎಸ್ಟಿ), ಪೂಜಾರಿದೊಡ್ಡಿ (ಮಿನಿಕೇಂದ್ರ) (ಎಸ್ಟಿ)ಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಹಾಗೂ ಚಿಕ್ಕಗುಡ್ಡ (ಎಸ್ಟಿ), ಎ.ಜಿ.ಕಾಲೊನಿ-1 (ಎಸ್ಟಿ)ಯಲ್ಲಿ ಅಂಗನವಾಡಿ ಸಹಾಯಕಿಯ ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಕೆಗೆ ಅ. 21 ಕೊನೆ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು https://karnemakaone.kar.nic.in/abcd/ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಆಫ್‌ಲೈನ್ ಅರ್ಜಿಗಳ ಸಲ್ಲಿಕೆಗೆ ಅವಕಾಶವಿಲ್ಲ. ಮಾಹಿತಿಗೆ 08531-295095 ಕರೆ ಮಾಡಬಹುದು ಅಥವಾ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.