ADVERTISEMENT

'ಸಂವಿಧಾನ ಉಳಿಸುವ ಸಂದಿಗ್ಧ ಸ್ಥಿತಿ’

ನವರತ್ನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಜನಾರ್ದನ ಹಳ್ಳಿಬೆಂಚಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 16:03 IST
Last Updated 6 ಡಿಸೆಂಬರ್ 2018, 16:03 IST
ರಾಯಚೂರಿನಲ್ಲಿ ಗುರುವಾರ ಅಂಬೇಡ್ಕರ್ ಮಹಾ ಪರಿ ನಿರ್ವಾಣ ದಿನವನ್ನು ನವರತ್ನ ಯುವಕ ಸಂಘದಿಂದ ಆಚರಣೆ ಮಾಡಲಾಯಿತು
ರಾಯಚೂರಿನಲ್ಲಿ ಗುರುವಾರ ಅಂಬೇಡ್ಕರ್ ಮಹಾ ಪರಿ ನಿರ್ವಾಣ ದಿನವನ್ನು ನವರತ್ನ ಯುವಕ ಸಂಘದಿಂದ ಆಚರಣೆ ಮಾಡಲಾಯಿತು   

ರಾಯಚೂರು: ಸಂವಿಧಾನಕ್ಕೆ ಧಕ್ಕೆ ತರುವ ಪ್ರಯತ್ನಗಳು ಮೇಲ್ಜಾತಿಯವರಿಂದ ನಡೆಯುತ್ತಿದ್ದು, ಪ್ರಗತಿಪರರು ಹೋರಾಟದ ಮೂಲಕ ಸಂವಿಧಾನ ಉಳಿಸಿಕೊಳ್ಳು ಸಂದಿಗ್ಧ ಪರಿಸ್ಥಿತಿಯಿದೆ ಎಂದು ನವರತ್ನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಜನಾರ್ದನ ಹಳ್ಳಿಬೆಂಚಿ ಹೇಳಿದರು.

ನಗರದ ಹರಿಜನವಾಡ ಬಡಾವಣೆಯ ಸಮುದಾಯ ಭವನದಲ್ಲಿ ನವರತ್ನ ಯುವಕ ಸಂಘದಿಂದ ಗುರುವಾರ ಆಯೋಜಿಸಿದ್ದ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದರು.

ಮೇಲ್ಜಾತಿಯವರ ದಬ್ಬಾಳಿಕೆಯ ವಿರುದ್ಧ ಹೋರಾಟ ನಡೆಸಿ ಸಂವಿಧಾನ ರಕ್ಷಣೆ ಮಾಡಿಕೊಳ್ಳುವ ಮೂಲಕ ಅಂಬೇಡ್ಕರ್ ಆಶಯಗಳನ್ನು ಉಳಿಸಬೇಕು ಎಂದರು.

ADVERTISEMENT

ನಗರಸಭೆ ಸದಸ್ಯ ಎನ್.ಕೆ.ನಾಗರಾಜ ಮಾತನಾಡಿ, ಮೇಲ್ಜಾತಿಯವರ ದಬ್ಬಾಳಿಕೆ ಹಾಗೂ ದೌರ್ಜನ್ಯಗಳನ್ನು ಹತ್ತಿಕ್ಕಲು ಅಂಬೇಡ್ಕರ್‌ ಮಾಡಿರುವ ಸೇವೆ ಅಪಾರವಾದದು ಎಂದು ಹೇಳಿದರು.

ಸಂಘದ ಅಧ್ಯಕ್ಷ ಶಿವಪ್ಪ ಮಣಿಗಿರಿ ಮಾತನಾಡಿ, ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಿದ್ದಾರೆ ಎಂದು ತಿಳಿಸಿದರು.

ಸದಸ್ಯ ಎಸ್.ಹುಲಿಗೆಪ್ಪ ಮಾತನಾಡಿದರು. ಎಸ್.ವೆಂಕಟೇಶ, ಸಿ.ಎಂ.ಗೋವಿಂದ, ನರಸಿಂಹಲು, ಶರಣಪ್ಪ, ನಾಗರಾಜ, ವೀರೇಶ ಗಂಗೋಲಿ, ಜಂಬಣ್ಣ ಸೋಲಾಪುರ, ಮಾರುತಿ, ರಘು ಇದ್ದರು.

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ:ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯಿಂದ ಜೆಸ್ಕಾಂ ಕಚೇರಿಯ ಆವರಣದಲ್ಲಿ ಗುರುವಾರ ಅಂಬೇಡ್ಕರ್‌ ಮಹಾ ನಿರ್ವಾಣ ದಿನ ಹಮ್ಮಿಕೊಳ್ಳಲಾಯಿತು.

ಗ್ರಾಮೀಣ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ ಮಾತನಾಡಿ, ಅಂಬೇಡ್ಕರ್ ದೇಶದ ಸ್ವತ್ತಾಗಿದ್ದು, ದೇಶದ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ಜೆ.ಎಲ್.ಗೋಪಿ ಮಾತನಾಡಿ, ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ದೇಶದ ಪ್ರತಿಯೊಬ್ಬರೂ ಬದ್ಧತೆ ತೋರಬೇಕು ಎಂದು ತಿಳಿಸಿದರು.

ಸತ್ಯಪ್ಪ ಮಾತನಾಡಿ, ಅಸ್ಪೃಶ್ಯತೆ ನಿವಾರಣೆಗೆ ಅಂಬೇಡ್ಕರ್ ಹಗಲಿರುಳು ಶ್ರಮಿಸಿದ್ದು, ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದ್ದಾರೆ ಎಂದರು.

ಎಂಜಿನಿಯರ್‌ಗಳಾದ ಪುರುಷೋತ್ತಮ, ಅಬ್ದುಲ್, ರಾಘವೇಂದ್ರ, ಹನುಮೇಶ, ಸಂತೋಷ, ಹನುಮೇಶ, ಕನಕ ಮಹೇಶ, ಶಶಿಕಾಂತ, ಆನಂದ, ಜಾವೀದ್, ಎಂ.ನಾಗಪ್ಪ, ವೆಂಕಟೇಶ, ರವಿಚಂದ್ರ, ಮಲ್ಲಣ್ಣ, ತಾಯಪ್ಪ, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ರಾಮಕೃಷ್ಣ, ಆಂಜನೇಯ, ಈಶ್ವರ, ದೇವದಾಸ, ಕಾಶಿಂಸಾಬ್, ಸುಭಾಷ, ವಿರೇಶ, ಶಾಲಂ, ಸಾಜೀದ್, ಶರಣಪ್ಪ, ಮಹಾದವ ಇದ್ದರು.

ನರಸಪ್ಪ ಮಣಿಗಿರಿ ಸ್ವಾಗತಿಸಿದರು. ದೇವನಪಲ್ಲಿ ಶ್ರೀನಿವಾಸ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.