ADVERTISEMENT

ಡಿಪ್ಲೋಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 2 ಮೇ 2019, 12:06 IST
Last Updated 2 ಮೇ 2019, 12:06 IST

ರಾಯಚೂರು: ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸಿಗೆ 2019–20ನೇ ಸಾಲಿನ ಪ್ರವೇಶಾತಿ ಬಯಸುವ ಅಭ್ಯರ್ಥಿಗಳು ಮೇ 18ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ನಮೂನೆಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ www.dte.kar.nic.in ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಮಾಹಿತಿ ಪುಸ್ತಕದಲ್ಲಿನ ಸೂಚನೆಗಳ ಅನ್ವಯ ಭರ್ತಿ ಮಾಡಬೇಕು. ಅಧಿಸೂಚನೆಯಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯನುಸಾರ ನಿಗದಿ ಅರ್ಜಿ ನೋಂದಣಿ ಶುಲ್ಕವನ್ನು ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ದಾಖಲೆಗಳ ಪರಶೀಲನಾ ಕೇಂದ್ರದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ 1ರ ಅಭ್ಯರ್ಥಿ ₹50 ಮತ್ತು ಸಾಮಾನ್ಯ ಅಭ್ಯರ್ಥಿಗಳು ₹ 100 ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಬೇಕು.

ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿ ಹಾಗೂ ಸ್ವೀಕೃತಿ ಪಡೆಯಬೇಕು. ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಸ್ವ ದೃಢೀಕರಿಸಿದ ಫೋಟೋ ಪ್ರತಿಗಳನ್ನು ಹಾಗೂ ನಾಲ್ಕು ಪಾಸ್‌ಫೋಟೋ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ದಾಖಲೆ ಪರಿಶೀಲನಾ ಕೇಂದ್ರದಲ್ಲಿ ಹಾಗೂ ವೆಬ್‌ಸೂಟ್‌ನಿಂದ ಪಡೆಯಬಹುದು.

ADVERTISEMENT

10 ರಂದು ‘ಭವಿಷ್ಯನಿಧಿ ತಮ್ಮ ಹತ್ತಿರ’
ರಾಯಚೂರು:
ಕಾರ್ಮಿಕರ ಭವಿಷ್ಯನಿಧಿ ಸೇವಾ ವ್ಯಾಪ್ತಿಗೊಳಪಡುವ ನೌಕರರ ಸಮಸ್ಯೆಗಳನ್ನು ಆಲಿಸುವ ಭವಿಷ್ಯನಿಧಿ ಅದಾಲತ್‌ ಕಾರ್ಯಕ್ರಮವನ್ನು ಭವಿಷ್ಯನಿಧಿ ತಮ್ಮ ಹತ್ತಿರ ಶೀರ್ಷಿಕೆಯಡಿ ಪ್ರತಿ ತಿಂಗಳು 10 ರಂದು ಆಯೋಜಿಸಲಾಗುತ್ತದೆ.

ಅಂದು ಬೆಳಿಗ್ಗೆ 10.30ರಿಂದ 1ಗಂಟೆವರೆಗೆ ಭವಿಷ್ಯನಿಧಿ ಚಂದಾದಾರರಿಗೆ ಹಾಗೂ ಮಧ್ಯಾಹ್ನ 2.45ರಿಂದ 4ಗಂಟೆವರೆಗೆ ಭವಿಷ್ಯನಿಧಿ ನಿಯೋಜಕರಿಗಾಗಿ ಕಾರ್ಮಿಕ ಭವಿಷ್ಯನಿಧಿ ಕಚೇರಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಚಂದಾದಾರರು, ಮಾಲೀಕರು ಹಾಗೂ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಅಹವಾಲುಗಳೇನಾದರು ಇದ್ದಲ್ಲಿ ಮೇ 05ರ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ನೇರವಾಗಿ ಅಥವಾ ದೂ. ಸಂ. 08532-230328 ಮೂಲಕ ನೋಂದಾಯಿಸಬಹುದು.

ವಿದ್ಯುತ್ ವ್ಯತ್ಯಯ ಇಂದು
ರಾಯಚೂರು:
11 ಕೆವಿ ಮಾರ್ಗದ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವದರಿಂದ ಮೇ 3ರಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಆರ್‌ಸಿಆರ್-6: ಲಿಂಗಸೂಗೂರು ರಸ್ತೆ, ಕೃಷಿ ವಿಶ್ವವಿದ್ಯಾಲಯ, ರಾಂಪೂರ್, ಅಸ್ಕಿಹಾಳ್, ಎಕ್ಲಾಸಪುರ್, ಚೌದರಿ ಲೇಔಟ್, ಬೈಪಾಸ್ ರಸ್ತೆ, ಎಂಆರ್ಎಸ್ ಕಾಲೋನಿ, ಭಾರತಿಲೇಔಟ್, ಆರ್‌ಸಿಆರ್‌–11: ಬಸವೇಶ್ವರ ಕಾಲೋನಿ, ಗೌಸಿಯಾ ಕಾಲೋನಿ, ಬಂದೇನವಾಜ್ ಕಾಲೋನಿ, ದೇವರಾಜ ಅರಸು ಕಾಲೋನಿ, ಲಿಟಲ್ ಏಂಜಲ್ ಶಾಲೆ, ಕಾಕತೀಯ ಶಾಲೆ, ಸಿದ್ಧಾರ್ಥ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.