ADVERTISEMENT

ಲಿಂಗಸುಗೂರು: 150 ಮಕ್ಕಳಿಗೆ ಮಂಗನ ಬಾವು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 5:11 IST
Last Updated 9 ಫೆಬ್ರುವರಿ 2024, 5:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಲಿಂಗಸುಗೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ 6ರಿಂದ 18 ವರ್ಷದ ಮಕ್ಕಳಲ್ಲಿ ಮಂಗನ ಬಾವು (ಗದ್ದಬಾವು) ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಒಂದು ವಾರದಲ್ಲಿ ಪ್ರಾಥಮಿಕ ಶಾಲೆಯ 150ಕ್ಕೂ ಹೆಚ್ಚು ಮಕ್ಕಳಲ್ಲಿ ಮಂಗನ ಬಾವು ಕಾಣಿಸಿಕೊಂಡಿದೆ. 

ಶಾಲೆಯ 1–7ನೇ ತರಗತಿಯಲ್ಲಿ ಒಟ್ಟು 302 ಮಕ್ಕಳು ಇದ್ದಾರೆ.

ADVERTISEMENT

ಮಂಗನ ಬಾವು ಕಾಣಿಸಿಕೊಂಡ ಮಕ್ಕಳು ಜ್ವರ, ಸ್ನಾಯು ನೋವು, ತಲೆ ನೋವಿನಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಆನೆಹೊಸೂರು ಸಮುದಾಯ ಆರೋಗ್ಯ ಕೇಂದ್ರ, ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆ ಸಂಪರ್ಕಿಸಿದ್ದು, ಸ್ಥಳೀಯವಾಗಿ ಚಿಕಿತ್ಸೆ ಲಭ್ಯವಾಗದೆ ಪರದಾಡುವಂತಾಗಿದೆ.

ಸ್ಥಳೀಯವಾಗಿ ಚಿಕಿತ್ಸೆ ಸಿಗದಿದ್ದರಿಂದ ಬೆಲ್ಲ ಅರಿಸಿನ ಲೇಪನ, ಜಗಟು ಪಟ್ಟಿ ಸೇರಿದಂತೆ ಮನೆ ಮದ್ದಿಗೆ ಜನ ಮೊರೆಹೋಗಿದ್ದಾರೆ. 

‘ಶಾಲೆಯಲ್ಲಿ ಬಹುತೇಕ ಮಕ್ಕಳಲ್ಲಿ ಮಂಗನಬಾವು ಕಾಯಿಲೆ ಕಾಣಿಸಿಕೊಂಡಿದೆ. ಕೆಲ ಮಕ್ಕಳು ಜ್ವರ ಇತರೆ ಲಕ್ಷಣಗಳಿಂದ ಅಸ್ವಸ್ಥಗೊಂಡಾಗ ಆನೆಹೊಸೂರು ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕಳುಹಿಸಿದ್ದೇವೆ’ ಎಂದು ಶಾಲಾ ಮುಖ್ಯ ಶಿಕ್ಷಕ ಶೇರಷಹಾ ದೋಟಿಹಾಳ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಮಾಕಾಪುರ ಅವರನ್ನು ಈ ಬಗ್ಗೆ ವಿಚಾರಿಸಿದಾಗ, ‘ಈ ರೋಗದಿಂದ ಭಯಗೊಳ್ಳುವ ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆಗೆ ಅಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.