ADVERTISEMENT

ಜಾಲಹಳ್ಳಿ| ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಿ: ಜಿ.ಎಸ್. ಸಂಗ್ರೇಶಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 6:27 IST
Last Updated 14 ಜನವರಿ 2026, 6:27 IST
ಜಾಲಹಳ್ಳಿ ಸಮೀಪದ ತಿಂಥಣಿ ಬ್ರಿಡ್ಜ್‌ ಬಳಿಯ ಕನಕಗುರು ಪೀಠದಲ್ಲಿ ಹಮ್ಮಿಕೊಂಡ ಹಾಲುಮತ ಸಾಹಿತ್ಯ ಸಮ್ಮೇಳದ ಎರಡನೇ ದಿನದ ಕಾರ್ಯಕ್ರವನ್ನು ಹೊಸದುರ್ಗದ ಕನಕಗುರು ಪೀಠದ ಈಶ್ವರನಂದ ಸ್ವಾಮೀಜಿ ಉದ್ಘಾಟಿಸಿದರು
ಜಾಲಹಳ್ಳಿ ಸಮೀಪದ ತಿಂಥಣಿ ಬ್ರಿಡ್ಜ್‌ ಬಳಿಯ ಕನಕಗುರು ಪೀಠದಲ್ಲಿ ಹಮ್ಮಿಕೊಂಡ ಹಾಲುಮತ ಸಾಹಿತ್ಯ ಸಮ್ಮೇಳದ ಎರಡನೇ ದಿನದ ಕಾರ್ಯಕ್ರವನ್ನು ಹೊಸದುರ್ಗದ ಕನಕಗುರು ಪೀಠದ ಈಶ್ವರನಂದ ಸ್ವಾಮೀಜಿ ಉದ್ಘಾಟಿಸಿದರು   

ಜಾಲಹಳ್ಳಿ: ‘ಪ್ರತಿಯೊಬ್ಬರೂ ನಿತ್ಯ ಯಾವುದೇ ಸ್ಥಳದಲ್ಲಿ ಗುಂಪು ಕುಳಿತರೆ ಸಾಕು ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಮತದಾರರು ಮತಗಟ್ಟೆ ಹೋಗಿ‌ ಮತದಾನ ಮಾಡದೇ ಉಳಿಯುವುದು ಸರಿಯಲ್ಲ. ಪ್ರತಿಯೊಬ್ಬರೂ ಸಹ ಮತದಾನ ಮಾಡಬೇಕು’ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ. ಎಸ್ ಸಂಗ್ರೇಶಿ ಹೇಳಿದರು.

ಮಂಗಳವಾರ ಸಮೀಪದ‌ ತಿಂಥಣಿ ಬ್ರಿಡ್ಜ್‌ನಲ್ಲಿ ಹಮ್ಮಿಕೊಂಡ ಹಾಲುಮತ ಸಾಹಿತ್ಯ ಸಮ್ಮೇಳದ ಎರಡನೇ ದಿನದ ಕಾರ್ಯಕ್ರಮದಲ್ಲಿ‌ ಸನ್ಮಾನಿತರಾಗಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ಬಗ್ಗೆ ಮಾತನಾಡುವ ಜನರು ಮತದಾನದ ವೇಳೆ ನಿರ್ಲಕ್ಷ್ಯ ಮಾಡುತ್ತಾರೆ. ಅರ್ಹರೆಲ್ಲರೂ ಮತದಾನ ಮಾಡಿ ಯೋಗ್ಯವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡರೆ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಎಲ್ಲಾ ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ’ ಎಂದರು.

ADVERTISEMENT

ಶಿವಮೊಗ್ಗದ ಲಿಂಗದಹಳ್ಳಿ ಹಾಲಪ್ಪ ಅವರು ಭಾರತೀಯ ಪಂಥಗಳು, ಬೆಂಗಳೂರಿನ ನಡ್ಡಗೇರಿ ನಾಗರಾಜಯ್ಯ ಅವರು ಕರ್ನಾಟಕ ಸಿದ್ದಪಂರಪರೆ, ಚಂದ್ರಪ್ಪ ಸೊಬಟಿ ಅವರು ಸಿದ್ದ ಪರಂಪರೆಯ ವಿಭಿನ್ನತೆಯ ವಿಷಯದ ಬಗ್ಗೆ ಬೋಧನೆ ಮಾಡಿದರು.

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ವೆಂಕಟ್‌ಸಿಂಗ್, ಗದಗ ವಿದ್ಯಾನಿಧಿ ಪ್ರಕಾಶನ ಮಾಲೀಕ ಜಯದೇವ ಮೆಣಸಗಿ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗದ ಅಧ್ಯಕ್ಷ ಕೆ.ಬಿ. ನಾಗೇಂದ್ರ, ಅಬಕಾರಿ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ, ರಾಜ್ಯ ಮಾಧ್ಯಮ ಅಕಾಡೆಮಿ‌ ಸದಸ್ಯ ನಿಂಗಜ್ಜ ಗಂಗಾವತಿ, ಸಿಂಡಿಕೇಟ್ ಸದಸ್ಯ ಶಿವಣ್ಣ, ಮಹಾಂತೇಶ ಕೌಲಗಿ ಅವರನ್ನು ಮಠದಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ಮಂಗಳೂರಿನ ಚಕ್ರಪಾಣಿ ನೃತ್ಯ ಕಲಾಕೇಂದ್ರದಿಂದ ನೃತ್ಯ ಸಂಯೋಜಕ ಎಸ್. ಚನ್ನಬಸಯ್ಯ ಅವರ ನೇತೃತ್ವದಲ್ಲಿ ಭಾರತ್ಯ ನಾಟ್ಯ ಜನತೆಯ ಗಮನ ಸೆಳೆಯಿತು. ಭಾಷಾಂತರ ನಿರ್ದೇಶನಾಲಯದ ನಿವೃತ ನಿರ್ದೇಶಕ ಈರಪ್ಪ ಎಂ. ಕಂಬಳಿ ಅಧ್ಯಕ್ಷತೆವಹಿಸಿದ್ದರು.

ಸಾನ್ನಿಧ್ಯವನ್ನು ಕೆ.ಆರ್ ನಗರದ ಕಾಗಿನೆಲೆ ಕನಕಗುರು ಪೀಠದ ಶಿವನಂದಪುರಿ ಸ್ವಾಮೀಜಿ, ಹೊಸ ದುರ್ಗದ ಕಾಗಿನೆಲೆ‌ ಕನಕಗುರು ಪೀಠದ ಈಶ್ವರನಂದ ಸ್ವಾಮೀಜಿ, ಗೋಳಸಾರದ ಅಭಿನವ ಪುಂಡಲಿಂಗ ಸ್ವಾಮೀಜಿ, ತಿಂಥಣಿ ಬ್ರಿಡ್ಜ್‌ನ ಕಾಗಿನೆಲೆ‌ ಕನಕಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ ವಹಿಸಿದ್ದರು.

ಈ ಸಂದರ್ಭದಲ್ಲಿ ಲಿಂಗಸೂಗೂರು ತಾಲ್ಲೂಕಿನ ತಹಶೀಲ್ದಾರ್ ಸಿದ್ದಮ್ಮ ಇದ್ದರು. ಶಿಕ್ಷಕಿ ಸವಿತಾ, ಚಿದಾನಂದ ಕಾರ್ಯಕ್ರಮ ನಿರ್ವಹಿಸಿದರು.

ಶೈಕ್ಷಣಿಕ ಆರ್ಥಿಕವಾಗಿ ಮುಂದೆ ಬರಲಿ

‘‌ಕುರುಬ ಸಮಾಜ ರಾಜ್ಯದಲ್ಲಿ ಸಂಘಟಿತರಾಗಬೇಕು. ರಾಜ್ಯದಲ್ಲಿ ಕುರುಬ ಸಮಾಜ 75 ಲಕ್ಷ ಜನಸಂಖ್ಯೆ ಹೊಂದಿದೆ. ಸುಮಾರು 32 ಜನ ಶಾಸಕರು ಇರಬೇಕು. ಅದರೆ ಈಗ ಇರುವುದು ಕೇವಲ 11 ಜನ ಶಾಸಕರು ಇದ್ದಾರೆ ಎಂದು ಬೆಂಗಳೂರಿನ ಇನ್‌ಸೈಟ್ಸ್‌ ಸಂಸ್ಥಾಪಕ ವಿನಯಕುಮಾರ ಜಿ.ಬಿ ಹೇಳಿದರು. ‘ಕೆಲವು ಕ್ಷೇತ್ರಗಳಲ್ಲಿ ಮೂರು ಸಾವಿರ ಜನ ಇರುವ ಅನ್ಯ ಸಮಾಜದ ಅಭ್ಯರ್ಥಿಗಳು ಗೆಲುವು ಸಾಧಿಸಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕುರುಬ ಸಮಾಜದ ಅಭ್ಯರ್ಥಿಗಳು ಸೋಲು ಅನುಭವಿಸುವಂತಾಗಿದೆ. ಕುರುಬ ಸಮಾಜದವರು ಶೈಕ್ಷಣಿಕ ಆರ್ಥಿಕವಾಗಿ ಸಧೃಡವಾಗಿ ಬೆಳೆಯಬೇಕು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ‌ ಕನಿಷ್ಠ ಇಪ್ಪತ್ತು ಜನ ನಾಯಕರನ್ನು ಬೆಳೆಸುವ ಕೆಲಸ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.