ADVERTISEMENT

ಸಿರವಾರ: ವಿದ್ಯುತ್ ತಗುಲಿ ಮೇವು ಭಸ್ಮ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:43 IST
Last Updated 8 ಡಿಸೆಂಬರ್ 2025, 6:43 IST
ಬೆಂಕಿಯನ್ನು ನಂದಿಸಲು ಯತ್ನಿಸಿದ ಜನರು
ಬೆಂಕಿಯನ್ನು ನಂದಿಸಲು ಯತ್ನಿಸಿದ ಜನರು   

ಸಿರವಾರ: ಪಟ್ಟಣದ ಹೊರವಯಲದಲ್ಲಿ ಭತ್ತದ ಮೇವು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಟ್ರ್ಯಾಲಿಗೆ ವಿದ್ಯುತ್ ತಂತಿ ತಗುಲಿ ಮೇವು ಸಂಪೂರ್ಣ ಭಸ್ಮವಾದ ಘಟನೆ ಭಾನುವಾರ ನಡೆದಿದೆ.

ಅಡಕಲಗುಡ್ಡ ಗ್ರಾಮದ ಮಲ್ಲಪ್ಪ ಎಂಬುವವರು ದನ ಕರುಗಳಿಗಾಗಿ ಭತ್ತದ ಮೇವನ್ನು ತುಂಬಿಕೊಂಡು ಪಟ್ಟಣದ ಮೂಲಕ ದೇವದುರ್ಗದ ತಾಲ್ಲೂಕಿನ ಅಡಕಲಗುಡ್ಡ ಗ್ರಾಮಕ್ಕೆ ಹೋಗುತ್ತಿರುವಾಗ ತುಂಗಭದ್ರಾ ವಿತರಣಾ ಕಾಲುವೆ 91ರ ಪಕ್ಕದಲ್ಲಿ ವಿದ್ಯುತ್ ತಂತಿ ತಗುಲಿ ಮೇವು ಸಂಪೂರ್ಣ ಭಸ್ಮವಾಗಿದೆ.

ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಸ್ಥಳದ ಪಕ್ಕದಲ್ಲಿದ್ದ ರೈತರು ನೀರು ಹಾಕುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ADVERTISEMENT
ಸಿರವಾರ ಸಮೀಪದಲ್ಲಿ ಹೊರವಯಲದಲ್ಲಿ ಭತ್ತದ ಮೇವು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಟ್ರ್ಯಾಲಿಗೆ ವಿದ್ಯುತ್ ತಂತಿ ತಗುಲಿ ಮೇವು ಸಂಪೂರ್ಣ ಭಸ್ಮವಾದ ಘಟನೆ ಭಾನುವಾರ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.