ADVERTISEMENT

ಸಮಗ್ರ ನೀರಾವರಿಗಾಗಿ ರೈತ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 11:58 IST
Last Updated 23 ಅಕ್ಟೋಬರ್ 2021, 11:58 IST
ಸಮಗ್ರ ನೀರಾವರಿಗಾಗಿ ಲಿಂಗಸುಗೂರು ಸಮಗ್ರ ನೀರಾವರಿ ಹಕ್ಕು ರಕ್ಷಣಾ ಸಮಿತಿಯವರು ಮುದಗಲ್‌ದಲ್ಲಿ ರೈತ ಜಾಗೃತಿ ಜಾಥಾ ಮಾಡಿದರು
ಸಮಗ್ರ ನೀರಾವರಿಗಾಗಿ ಲಿಂಗಸುಗೂರು ಸಮಗ್ರ ನೀರಾವರಿ ಹಕ್ಕು ರಕ್ಷಣಾ ಸಮಿತಿಯವರು ಮುದಗಲ್‌ದಲ್ಲಿ ರೈತ ಜಾಗೃತಿ ಜಾಥಾ ಮಾಡಿದರು   

ಮುದಗಲ್: ಸಮಗ್ರ ನೀರಾವರಿಗಾಗಿ ಲಿಂಗಸುಗೂರು ಸಮಗ್ರ ನೀರಾವರಿ ಹಕ್ಕು ರಕ್ಷಣಾ ಸಮಿತಿಯವರು ವಿವಿಧಡೆ ರೈತ ಜಾಗೃತಿ ಜಾಥಾ ಕಾರ್ಯಕ್ರಮ ಮಾಡಿದರು.

ಮುದಗಲ್ ಪಟ್ಟಣ, ಆಮದಿಹಾಳ, ನಂದವಾಡಗಿ, ಬೆಳ್ಳಿಹಾಳ, ಚಾಮಲಾಪುರ, ಕಂಬಳಿಹಾಳ, ಕೋಮನೂರ, ಸಜ್ಜಲಗುಡ್ಡ, ಕೋಡಿಹಾಳ, ನಾಗರಹಾಳ, ಬೋಗಾಪುರ, ಬಯ್ಯಪುರು ಗ್ರಾಮಗಳಲ್ಲಿ ರೈತ ಜಾಗೃತಿ ಜಾಥಾ ಮಾಡಿ, ನಂದವಾಡಗಿ, ನಾರಾಯಣಪುರ, ರಾಂಪುರ ಏತ ನೀರವಾರಿ, 9 ಎ ಕಾಲುವೆ ಯೋಜನೆಗಳ ನಿರ್ಮಾಣ ದುರಸ್ತಿ ಹೆಸರಿನಲ್ಲಿ ಬಿಜೆಪಿ ಸರ್ಕಾರದ ₹ 4500 ಕೋಟಿ ಭ್ರಷ್ಟಾಚಾರ ಮಾಡಿರುವುದು ವಿರೋಧಿಸಿ ಜಾಥಾ ಮಾಡುತ್ತಿದೆ. ನಂದವಾಡಗಿ ಹನಿ ನೀರಾವರಿ ಹಾಗೂ 5 (ಎ) ಹೊಸ ನಾಲೆ ಸಮೇತ ಸಮಗ್ರ ನೀರಾವರಿಗೆ ಆಗ್ರಹಿಸಿ ರೈತರ ಜಾಗೃತಿ ಜಾಥಾ ಮಾಡಿದರು.

ಕಾರ್ಮಿಕ ಮುಖಂಡ ಆರ್, ಮಾನಸಯ್ಯ, ಚಿನ್ನಪ್ಪ ಕೋಟ್ರಿಕಿ, ಎಂ.ಗಂಗಾಧರ, ಅಮರೇಗೌಡ ಗುಂತಗೋಳ, ತಿಪ್ಪರಾಜ ಗೆಜ್ಜಲಗಟ್ಟಾ, ಭಾರತ ಕ್ರಾಂತಿಕಾರಿ ಯುವಜನ ಬಸವರಾಜ, ಮುದಗಲ್.ಬಸವರಾಜ ಹಿರೆ ಹೆಸರೂರು, ರಮೇಶ್ ಮುದಗಲ್, ರವಿ ಮುದಗಲ್, ರಮೇಶ, ಹುಲೇಶ, ಸತೀಶ್, ಶರಣ್ಣಬಸವ, ಹನುಮೇಶ ನಾಯಕ, ರಹಿಮಾನ್ ದುಲಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.