ADVERTISEMENT

ರಾಯಚೂರಿನಲ್ಲಿ ಅ.15ರಿಂದ ಚಿತ್ರಮಂದಿರ ಆರಂಭವಿಲ್ಲ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 13:23 IST
Last Updated 14 ಅಕ್ಟೋಬರ್ 2020, 13:23 IST
ರಾಯಚೂರಿನ ಎಸ್.ಎನ್.ಟಿ ಚಿತ್ರಮಂದಿರ
ರಾಯಚೂರಿನ ಎಸ್.ಎನ್.ಟಿ ಚಿತ್ರಮಂದಿರ   

ರಾಯಚೂರು: ಜಿಲ್ಲೆಯಲ್ಲಿ ಚಲನಚಿತ್ರಮಂದಿರಗಳು ಅಕ್ಟೋಬರ್‌ 15ರಿಂದ ಪ್ರದರ್ಶನ ಆರಂಭಿಸುತ್ತಿಲ್ಲ.

‘ಸರ್ಕಾರದಿಂದ ಅಥವಾ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಯಾವುದೇ ಆದೇಶ ಪತ್ರಗಳು ಬಂದಿಲ್ಲ’ ಎಂದು ಚಿತ್ರ ಮಂದಿರ ನಿರ್ವಹಣೆ ಮಾಡುತ್ತಿರುವ ನೌಕರರು ತಿಳಿಸಿದ್ದಾರೆ.

ಅಕ್ಟೋಬರ್‌ 15ರಿಂದ ಚಲನಚಿತ್ರ ಪ್ರದರ್ಶನ ಆರಂಭಿಸುವುದಕ್ಕೆ ರಾಜ್ಯ ಸರ್ಕಾರವು ಈಗಾಗಲೇ ಅನುಮತಿ ನೀಡಿದೆ. ಆದರೆ, ಆಯಾ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಅಧಿಕೃತವಾಗಿ ಅನುಮತಿ ನೀಡಬೇಕಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ‘ಚಿತ್ರಮಂದಿರಗಳಲ್ಲಿ ಕೊರೊನಾ ಸೋಂಕು ತಡೆಗೆ ಯಾವ ರೀತಿ ಮುನ್ನಚ್ಚೆರಿಕೆ ವಹಿಸಿದ್ದಾರೆ ಎಂಬುದನ್ನು ಪರಿಶೀಲಿಸಿಲ್ಲ. ಥಿಯೇಟರ್‌ ಮಾಲೀಕರ ಸಭೆ ಕರೆದು, ಆನಂತರ ಅನುಮತಿ ನೀಡಲಾಗುವುದು. ಇದುವರೆಗೂ ಚಿತ್ರಮಂದಿರಗಳ ಮಾಲೀಕರು ಜಿಲ್ಲಾಡಳಿತದಿಂದ ಅನುಮತಿಯನ್ನು ಕೋರಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.