
 ಪ್ರಜಾವಾಣಿ ವಾರ್ತೆ
ಪ್ರಜಾವಾಣಿ ವಾರ್ತೆರಾಯಚೂರು: ತಾಲ್ಲೂಕಿನ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಪಿಎಸ್)ದ ಎರಡನೇ ಘಟಕದ ವಿದ್ಯುತ್ ಟ್ರಾನ್ಸ್ ಪಾರ್ಮರ್ ಗುರುವಾರ ತಡರಾತ್ರಿ ಬೆಂಕಿ ಹೊತ್ತಿ ಉರಿದಿದೆ.
ಒಂದು ಕೋಟಿ ಮೊತ್ತದ ಉಪಕರಣಗಳು ಸುಟ್ಟುಹೋಗಿವೆ. ಆರ್‌ಟಿಪಿಎಸ್, ವೈಟಿಪಿಎಸ್ ಬೆಂಕಿ ನಂದಿಸುವ ವಿಭಾಗದವರು ಹಾಗೂ ರಾಯಚೂರು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
'800 ಮೆಗಾವಾಟ್ ವಿದ್ಯುತ್ ಘಟಕದ ಉತ್ಪಾದನೆ ಆರಂಭಕ್ಕೆ ಸಿಂಕ್ರೇಷನ್ ಮಾಡುತ್ತಿರುವಾಗ ಬೆಂಕಿ ಅವಘಡ ಸಂಭವಿಸಿದೆ' ಎಂದು ವೈಟಿಪಿಎಸ್ ಯೋಜನಾ ಪ್ರದೇಶದ ಮುಖ್ಯಸ್ಥ ಶಶಿಕಾಂತ ತಿಳಿಸಿದರು.
ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಬೆಂಕಿ ಅವಘಡಗಳು ಸಾಮಾನ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.