ಲಿಂಗಸುಗೂರು ತಾಲ್ಲೂಕಿನ 14 ಸರ್ಕಾರಿ ಶಾಲೆಗಳಿಗೆ ಕೃತಗ್ಯತಾ ಟ್ರಸ್ಟ್ ಪೂರೈಸಿದ ಗ್ರೀನ್ ಬೋರ್ಡ್‌ಗಳನ್ನು ಆಯಾ ಶಾಲಾ ಶಿಕ್ಷಕರಿಗೆ ವಿತರಿಸಲಾಯಿತು
ಲಿಂಗಸುಗೂರು: ತಾಲ್ಲೂಕಿನ 14 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ವತಿಯಿಂದ 50 ಹಸಿರು ಬೋರ್ಡ್ ವಿತರಿಸಲಾಯಿತು.
ಪಟ್ಟಣದ ಗುರುಭವನದಲ್ಲಿ ಭಾನುವಾರ ಶಾಲಾ ಮುಖ್ಯಶಿಕ್ಷಕರಿಗೆ ವಿತರಿಸಿದ ಬಿಇಒ ಸುಜಾತ ಹೂನೂರು ಮಾತನಾಡಿ,‘ತಾಲ್ಲೂಕಿನ 14 ಶಾಲೆಗಳಿಗೆ 50 ಗ್ರೀನ್ ಬೋರ್ಡ್ ಗಳನ್ನು ನೀಡಿದ್ದು ಇವುಗಳನ್ನು ಶಿಕ್ಷಕರು ಹಾಗೂ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.
‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳು ಕೈಜೋಡಿಸುತ್ತಿದ್ದು, ಇದರ ಫಲವನ್ನು ಪಡೆದು ಮಕ್ಕಳು ಉತ್ತಮವಾಗಿ ಕಲಿತು ದೇಶದ ಭವ್ಯ ಪ್ರಜೆಗಳಾಗಬೇಕು’ ಎಂದರು.
ಶಿಕ್ಷಕ ಮೌನೇಶ್ ಎಂ, ಪಟ್ಟಣದ ಬಾಲಕಿಯರ ಶಾಲೆ, ತಾಲ್ಲೂಕಿನ ಗುಂತಗೋಳ, ಯರಗೋಡಿ, ತೊರಲಬೆಂಚಿ, ಕೆಸರಟ್ಟಿ, ಬೆಂಡೋಣಿ, ಗೊರೇಬಾಳ ತಾಂಡ, ಹಲ್ಕಾವಟಗಿ,ಮುದಗಲ್,ರಾಂಪುರ, ನೀರಲಕೇರಿ, ಛತ್ತರ್, ಸಜ್ಜಲಗುಡ್ಡ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಕೃತಗ್ಯತಾ ಟ್ರಸ್ಟ್ ಅವರು ₹ 2 ಲಕ್ಷ ಮೌಲ್ಯದ 50 ಗ್ರೀನ್ ಬೋರ್ಡ್‌ಗಳನ್ನು ಒದಗಿಸಿದ್ದಾರೆ ಎಂದರು.
ಶಿಕ್ಷಣ ಸಂಯೋಜಕ ಬಸವರಾಜ ಗುಡಿಹಾಳ, ಸಮೂಹ ಸಂಪನ್ಮೂಲ ವ್ಯಕ್ತಿ ಯಾಸೀನ್, ಶಿಕ್ಷಕರಾದ ಶೇರ್ ಷಾ ದೋಟಿಹಾಳ, ಜಗದೀಶ್ ತೊಗರಿ, ವೀರೇಶ ತೇರದಾಳ, ರಿಯಾಜ್, ರುದ್ರಮುನಿ ಗೊರೆಬಾಳ, ಶಶಿಕಾಂತ , ಶ್ರೀಶೈಲ, ಕಿಟ್ಟಿ ನಾಯಕ, ವಿಶ್ವಾರಾಧ್ಯ, ಪಂಪಣ್ಣ, ರಾಮಕೃಷ್ಣ, ನಾಗೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.