
ಪ್ರಜಾವಾಣಿ ವಾರ್ತೆ
ಶಕ್ತಿನಗರ: ಹನುಮ ಜಯಂತಿ ಪ್ರಯುಕ್ತ ಆರ್‌ಟಿಪಿಎಸ್ ಕಾಲೊನಿಯ ಆಂಜನೇಯ್ಯ ದೇವಸ್ಥಾನದಲ್ಲಿ ಮಂಗಳವಾರ ತೊಟ್ಟಿಲೋತ್ಸವ ನಡೆಯಿತು.
ದೇಗುಲದಲ್ಲಿ ಪಂಚಾಮೃತ ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಹನುಮ ದೇವರನ್ನು ಪ್ರಾಣ ದೇವರು ಎಂತಲೂ ಕರೆಯಲಾಗುತ್ತದೆ. ದೇಹಕ್ಕೆ ಪ್ರಾಣ ಎಷ್ಟು ಮುಖ್ಯವೋ, ಅದರಂತೆ ನೆಮ್ಮದಿಯಿಂದ ಜೀವನ ನಡೆಸಲು ಹನುಮನ ಸ್ಮರಣೆಯೂ ಮುಖ್ಯವಾಗಿದೆ. ನಿತ್ಯ ಹನುಮ ದೇವರನ್ನು ಸ್ಮರಿಸಿ ಪೂಜೆ ಮಾಡಿದರೆ, ಎಲ್ಲ ಕೆಲಸಗಳು ಸರಳವಾಗಿ ನಡೆಯುತ್ತವೆ. ದೇಶದೆಲ್ಲೆಡೆ ಕೊರೊನಾ ತೊಲಗಲಿ, ಶಾಂತಿ, ನೆಮ್ಮದಿ, ಸೌಹಾರ್ದತೆ ನೆಲೆಸಲಿ ಎಂದು ಅರ್ಚಕರು ಪ್ರಾರ್ಥಿಸಿದರು.
ಕೊರೊನಾ ಕರ್ಫ್ಯೂ ಕಾರಣ ಸಂಜೆ ನಡೆಯಬೇಕಿದ್ದ ಹನುಮ ರಥೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.