ADVERTISEMENT

ಹಟ್ಟಿ: ಚಿನ್ನ ಉತ್ಪಾದನೆ ಸ್ಧಗಿತ

​ಪ್ರಜಾವಾಣಿ ವಾರ್ತೆ
Published 12 ಮೇ 2021, 21:20 IST
Last Updated 12 ಮೇ 2021, 21:20 IST
ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ಕಾರ್ಯಾಲಯದ ಹೋರ ನೋಟ
ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ಕಾರ್ಯಾಲಯದ ಹೋರ ನೋಟ   

ಹಟ್ಟಿ ಚಿನ್ನದ ಗಣಿ: ಇಲ್ಲಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿಮೇ 24ರವರೆಗೆ ಚಿನ್ನ ಉತ್ಪಾದನೆ ಸ್ಧಗಿತಗೊಳಿಸಲಾಗಿದೆ.

‘ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಈಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕರು ಹಾಗೂ ಸಿಬ್ಬಂದಿಗೆ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ’ ಎಂದು ಕಂಪನಿಯ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಬಹದೂರ್ತಿಳಿಸಿದ್ದಾರೆ.

‘ನೌಕರರು ಅನವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡಿದರೆ ಅಂಥವರನ್ನು ಗೈರುಹಾಜರಿ ಎಂದು ಪರಿಗಣಿಸಲಾಗುವುದು. ನೌಕರರು ಕೇಂದ್ರ ಬಿಟ್ಟು ಬೇರೆ ಸ್ಥಳಗಳಿಗೆ ಭೇಟಿ ನೀಡಿ ಬಂದರೆ ಅಂಥವರ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಅಡಿ ‍ಪ್ರಕರಣ ದಾಖಲಿಸಲಾಗುವುದು’ ಎಂದುಎಚ್ಚರಿಸಿದ್ದಾರೆ.

ADVERTISEMENT

‘ಅದಿರನ್ನು ಸಂಸ್ಕರಿಸಿ ದಿನಕ್ಕೆ 5 ಕೆ.ಜಿ ಚಿನ್ನ ಉತ್ಪಾದನೆ ಮಾಡಲಾಗುತ್ತಿತ್ತು. ಈಗ ಉತ್ಪಾದನೆ ಸ್ಧಗಿತವಾಗಿದ್ದರಿಂದ ಗಣಿ ಕಂಪನಿಗೆ ನಷ್ಟವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಚಿನ್ನ ಉತ್ಪಾದನೆ ಹೆಚ್ಚಳ ಮಾಡಿ ನಷ್ಟ ಸರಿಪಡಿಸಲಾಗುವುದು’ ಎಂದು ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.