ADVERTISEMENT

ಹಟ್ಟಿ ಚಿನ್ನದ ಗಣಿ | ನರೇಗಾ ಹಣ ದುರುಪಯೋಗ: ಒಂಬುಡ್ಸ್‌ಮನ್ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:52 IST
Last Updated 9 ಡಿಸೆಂಬರ್ 2025, 6:52 IST
ಹಟ್ಟಿ ಸಮೀಪದ ಗೌಡೂರು ಗ್ರಾ.ಪಂ.ನಲ್ಲಿ ನರೇಗಾ ಯೋಜನೆಯ ಹಣ ದುರುಪಯೋಗ ದೂರಿನ ಅನ್ವಯ ಜಿಲ್ಲಾ ಒಂಬುಡ್ಸ್‌ಮನ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು 
ಹಟ್ಟಿ ಸಮೀಪದ ಗೌಡೂರು ಗ್ರಾ.ಪಂ.ನಲ್ಲಿ ನರೇಗಾ ಯೋಜನೆಯ ಹಣ ದುರುಪಯೋಗ ದೂರಿನ ಅನ್ವಯ ಜಿಲ್ಲಾ ಒಂಬುಡ್ಸ್‌ಮನ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು    

ಹಟ್ಟಿ ಚಿನ್ನದ ಗಣಿ: ‘ಗುರುಗುಂಟಾ ಹೋಬಳಿ ವ್ಯಾಪ್ತಿಗೆ ಬರುವ ಗೌಡೂರು ಗ್ರಾ.ಪಂ. ಅಧ್ಯಕ್ಷ, ಪಿಡಿಒ ಹಾಗೂ ಎಂಜಿನಿಯರ್ ಸೇರಿ ನರೇಗಾ ಯೋಜನೆಯ ಹಣವನ್ನು ಕಾಮಗಾರಿ ನಿರ್ವಹಿಸದೆ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ಗ್ರಾಮದ ವಿದ್ಯಾಸಾಗರ ನಾಯಕ ಎನ್ನುವವರು ಆರೋಪಿಸಿದ್ದು, ದೂರಿನ ಮೇರೆಗೆ ಜಿಲ್ಲಾ ಒಂಬುಡ್ಸ್‌ಮನ್ ಅಧಿಕಾರಿಗಳ ತಂಡ ಗೌಡೂರು ಗ್ರಾ.ಪಂ.ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಗೌಡೂರು ತಾಂಡಾದ ಮುಖ್ಯರಸ್ತೆಯಲ್ಲಿ ಗೋದಾಮು ನಿರ್ಮಾಣದ (ಮಾಸ್ಟರ್ ರೂಲ್ ) ಎರಡು ಕಾಮಗಾರಿಗಳಲ್ಲಿ ಒಂದೇ ಸಮಯಕ್ಕೆ ಒಂದೇ ಕೂಲಿ ಕಾರ್ಮಿಕರನ್ನು ಎರಡು ಕಡೆ ಜಿಪಿಆರ್‌ಎಸ್ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ. ಶೇ 10ರಷ್ಟು ಕಾಮಗಾರಿ ಮಾಡಿ ಶೇ 90ರಷ್ಟು ಹಣ ಎತ್ತುವಳಿ ಮಾಡಿದ್ದಾರೆ. ಇದೇ ತರಹ ಕಾಮಗಾರಿಗಳ ಹೆಸರಿನಲ್ಲಿ ₹1.40 ಕೋಟಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೆ ಗೌಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಗೋಡೆ ಕಟ್ಟುವ ಕಾಮಗಾರಿ ತೋರಿಸಿ ಗೋಡೆ ಕಟ್ಟದೇ ₹2.25 ಲಕ್ಷ ಕೂಲಿಕಾರರ ಖಾತೆಗೆ ಜಮೆ ಮಾಡಿ ಎತ್ತಿಕೊಂಡಿದ್ದಾರೆ. ಈ ಎಲ್ಲ ಕಾಮಗಾರಿಗಳನ್ನು ತನಿಖೆ ಮಾಡಿ ತಪಿತಸ್ಧರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾಸಾಗರ ಎನ್ನುವವರು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಮೇರಿಗೆ ಜಿಲ್ಲಾ ಒಂಬುಡ್ಸ್‌ಮನ್ ತಂಡದ ಎಸ್.ಎಚ್.ಕೊಪ್ಪರದ ಹಾಗೂ ತಂಡ ಗ್ರಾ.ಪಂ.ಗೆ ಭೇಟಿ ನೀಡಿ ನಗೇರಾ ಕಾಮಗಾರಿಗಳ ಬಗ್ಗೆ ಸ್ಧಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ADVERTISEMENT

ನಂತರ ಮಾತನಾಡಿದ ಎಸ್.ಎಚ್.ಕೊಪ್ಪರದ್‌, ‘ಕಾಮಗಾರಿಗಳ ಬಗ್ಗೆ ಸ್ಧಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇವೆ. ಸಂಬಂಧಪಟ್ಟ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.