ADVERTISEMENT

ಮುದಗಲ್: ಹಜರತ್ ಅಬ್ದುಲ್ಲಾ ಷಾ ಖಾದ್ರಿ ಉರುಸ್

​ಪ್ರಜಾವಾಣಿ ವಾರ್ತೆ
Published 24 ಮೇ 2025, 12:47 IST
Last Updated 24 ಮೇ 2025, 12:47 IST
ಮುದಗಲ್ ಪಟ್ಟಣದ ಹಳೆಪೇಟೆಯಲ್ಲಿ ಹಜರತ್ ಸೈಯದ್ ಅಬ್ದುಲ್ಲಾ ಷಾ ಖಾದ್ರಿ, ಹಜರತ್ ಸೈಯದ್ ಬಾದುಲ್ಲಾ ಷಾ ಖಾದ್ರಿ, ಹಜರತ್ ಸೈಯದ್ ಇಬ್ರಾಹಿಂ ಷಾ ಖಾದ್ರಿ ಅವರ ಉರುಸ್ ಜರುಗಿತು
ಮುದಗಲ್ ಪಟ್ಟಣದ ಹಳೆಪೇಟೆಯಲ್ಲಿ ಹಜರತ್ ಸೈಯದ್ ಅಬ್ದುಲ್ಲಾ ಷಾ ಖಾದ್ರಿ, ಹಜರತ್ ಸೈಯದ್ ಬಾದುಲ್ಲಾ ಷಾ ಖಾದ್ರಿ, ಹಜರತ್ ಸೈಯದ್ ಇಬ್ರಾಹಿಂ ಷಾ ಖಾದ್ರಿ ಅವರ ಉರುಸ್ ಜರುಗಿತು   

ಮುದಗಲ್: ಹಳೆಪೇಟೆಯ ಹಜರತ್ ಸೈಯದ್ ಅಬ್ದುಲ್ಲಾ ಷಾ ಖಾದ್ರಿ, ಹಜರತ್ ಸೈಯದ್ ಬಾದುಲ್ಲಾ ಷಾ ಖಾದ್ರಿ, ಹಜರತ್ ಸೈಯದ್ ಇಬ್ರಾಹಿಂ ಷಾ ಖಾದ್ರಿ ಅವರ ಉರುಸ್ ಜರುಗಿತು.

ಹಳೆಪೇಟೆಯ ಪುರಸಭೆ ಸದಸ್ಯೆ ತಸ್ಲೀಂ ಅಹ್ಮದ್ ಮುಲ್ಲಾ ಅವರ ನಿವಾಸದಿಂದ ಗಂಧದ ಮೆರವಣಿಗೆ ಪ್ರಾರಂಭವಾಯಿತು. ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಜರತ್ ಮೌಲಾ ಅಲಿ ಕಟ್ಟೆ ಹತ್ತಿರ ಫಾತೇಹಾ ಮಾಡಿಸಿ ಹಜರತ್ ಅವರ ದರ್ಗಾ ತಲುಪಿತು.

ಸೈಯದ್ ಯಾಸಿನ್ ಖಾದ್ರಿ, ಸೈಯದ್ ಹಾಸೀಮ್ ಖಾದ್ರಿ, ಸೈಯದ್ ಹುಸೇನ್ ಖಾದ್ರಿ, ಜವೂರಸಾಬ್, ಫಾರೂಕ್ ಸಾಹೇಬ್ ಅವರುಗಳ ಸಮ್ಮುಖದಲ್ಲಿ ಗಂಧ ಕಾರ್ಯಕ್ರಮ ಜರುಗಿತು.

ADVERTISEMENT

ಮೌಲಾನ ಫಿರೋಜ್, ಮೌಲಾನ ಮಹೆಬೂಬ್ ಅಲಿ, ಮಹೆಬೂಬ್ ಮೌಲಾನ, ಅಬ್ದುಲ್ ಮಜೀದ್ ಮುಲ್ಲಾ, ಸಾಜೀದ್ ಮಹ್ಮದ್ ಇಜಾಜ್ ಅಹ್ಮದ್, ಬಾಷಾ ಸಾಬ ಅರಗಂಜಿ, ಎಸ್.ಎ.ನಯೀಮ್ ಜುನೈದಿ ಹಾಗೂ ಅಮೀರ್ ಬೇಗ್ ಉಸ್ತಾದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.