ADVERTISEMENT

ರಾಯಚೂರು: ಜಿಲ್ಲೆಯಲ್ಲಿ 18 ಎಂಎಂ ಮಳೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 11:57 IST
Last Updated 23 ಜುಲೈ 2020, 11:57 IST

ರಾಯಚೂರು: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೂ ರಾಯಚೂರು ತಾಲ್ಲೂಕು ಹೊರತುಪಡಿಸಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದ್ದು, ಮಾಪಕದಲ್ಲಿ 18 ಮಿಲಿಮೀಟರ್‌ ದಾಖಲಾಗಿದೆ.ವಾಡಿಕೆ ಮಳೆ 4 ಮಿಲಿಮೀಟರ್‌ ಆಗಬೇಕಿತ್ತು, ಶೇ 373 ರಷ್ಟು ಅಧಿಕವಾಗಿದೆ.

ಮಸ್ಕಿ ತಾಲ್ಲೂಕಿನಲ್ಲಿ ಅತಿಹೆಚ್ಚು 29 ಮಿಲಿಮೀಟರ್‌ ಮಳೆಯಾಗಿದೆ. ಸಿಂಧನೂರಿನಲ್ಲಿ 18, ದೇವದುರ್ಗದಲ್ಲಿ 28, ಲಿಂಗಸುಗೂರು 16, ಮಾನ್ವಿ 12, ರಾಯಚೂರು 4, ಸಿರವಾರದಲ್ಲಿ 16 ಮಿಲಿಮೀಟರ್‌ ಮಳೆಯಾಗಿದೆ.ಹಳ್ಳಗಳು ತುಂಬಿ ಹರಿಯುತ್ತಿದ್ದು, ಬಿತ್ತನೆ ಆಗಿರುವ ಜಮೀನಿನ ಫಲವತ್ತಾದ ಮಣ್ಣುಕೆಲವು ಕಡೆಗಳಲ್ಲಿ ಕೊಚ್ಚಿ ಹೋಗುತ್ತಿದ್ದು, ರೈತರಲ್ಲಿ ಚಿಂತೆ ಆರಿಸಿದೆ. ಮಳೆ ಬಿಡುವು ನೀಡುತ್ತಿಲ್ಲ. ಬೀಜಗಳು ಕೊಳೆತು ಹಾನಿಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT