ADVERTISEMENT

ಮಸ್ಕಿ: ಘರ್ಷಣೆ, ಗಾಯ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:41 IST
Last Updated 18 ಮೇ 2022, 4:41 IST

ಮಸ್ಕಿ: ಮುಸ್ಲಿಂ ಹಾಗೂ ಹಿಂದೂ ಯುವಕರು ಮಂಗಳವಾರ ಪರಸ್ಪರ ಹೊಡೆದಾಡಿಕೊಂಡು ಚಾಕುವಿನಿಂದ ಇರಿದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ.

ಸೋಮನಾಥ ನಗರ ಬಡಾವಣೆ ನಿವಾಸಿಗಳಾದ ಶರಣಬಸವ, ರವಿ, ಸುರೇಶ, ಕಾಸೀಂ, ಶಾಹೀದ್‌ ಹಾಗೂ ಜಾಫರ್‌ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

‘ಮುಸ್ಲಿಂ ಯುವಕನೊಬ್ಬ ಸೈಕಲ್‌ ಮೇಲೆ ಟಿಪ್ಪು ಮತ್ತು ಅಂಬೇಡ್ಕರ್‌ ಪರ ಘೋಷಣೆ ಇರುವ ಫಲಕ ಅಂಟಿಸಿಕೊಂಡು ಓಡಾಡುತ್ತಿದ್ದ. ಇದನ್ನು ತೆಗೆಯುವ ಕುರಿತು ಶುರುವಾದ ವಾಗ್ವಾದ ಗಲಾಟೆಗೆ ತಿರುಗಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗಲಾಟೆಯಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಿದ್ದು,ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ಡಿವೈಎಸ್‌ಪಿ ವೆಂಕಟಪ್ಪ ನಾಯಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.