
ರಾಯಚೂರು: ‘ಅಧ್ಯಾಪಕರು ಜನರ ಆರೋಗ್ಯ ಸಮಸ್ಯೆಗಳ ಕುರಿತು ಐಸಿಎಂಆರ್ ನಡೆಸುವ ಸಂಶೋಧನೆಗಳಲ್ಲಿ ಭಾಗವಹಿಸಲು ಜಂಟಿ ಕಾರ್ಯಯೋಜನೆಗಳನ್ನು ರೂಪಿಸಬಹುದು‘ ಎಂದು ಐಸಿಎಂಆರ್ ಬೆಳಗಾವಿಯ ನಿರ್ದೇಶಕ ಸುಬರ್ಣ ರಾಯ್ ಸಲಹೆ ನೀಡಿದರು.
ನಗರದ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಐಸಿಎಂಆರ್- ಎನ್ಐಟಿಎಂ ವತಿಯಿಂದ ಗುರುವಾರ ‘ಐಸಿಎಮ್ಆರ್ ಮೂಲಕ ಲಭ್ಯವಿರುವ ಅನುದಾನ ಅವಕಾಶಗಳು ಮತ್ತು ಅನುದಾನ ಪಡೆಯಲು ಸಂಶೋಧನಾ ಪ್ರಸ್ತಾವನೆ ಬರೆಯುವಿಕೆ‘ ಕುರಿತ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
‘ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಾಪಕರು ತಮ್ಮ ಸಂಶೋಧನೆಗಳನ್ನು ಐಸಿಎಂಆರ್ ನಲ್ಲಿರುವ ಸೌಲಭ್ಯಗಳು ಹಾಗೂ ಮಾರ್ಗದರ್ಶಕರ ಸಹಾಯದೂಂದಿಗೆ ಸಂಶೋಧನೆ ಕೈಗೊಳ್ಳಬೇಕು‘ ಎಂದು ಹೇಳಿದರು.
ನವೋದಯ ಶಿಕ್ಷಣ ಸಂಸ್ಥೆಯ ಕುಲಸಚಿವ ಡಾ. ಟಿ ಶ್ರೀನಿವಾಸ ಮಾತನಾಡಿ, ‘ನವೋದಯ ಸಂಸ್ಥೆಯಲ್ಲಿ ಮೊದಲಿನಿಂದಲೂ ವಿದ್ಯಾರ್ಥಿ ಮತ್ತು ಅಧ್ಯಾಪಕರು ಸಂಶೋಧನೆಗಳನ್ನು ಕೈಗೊಳ್ಳುತ್ತಿದ್ದಾರೆ. ನೂರಾರು ವೈಜ್ಞಾನಿಕ ಪ್ರಬಂಧಗಳನ್ನು ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಹಲವು ಸಂಸ್ಥೆಗಳಿಂದ ಅನುದಾನಗಳನ್ನು ಪಡೆಯುತ್ತಿದ್ದಾರೆ‘ ಎಂದು ತಿಳಿಸಿದರು.
‘ಮುಂಬರುವ ದಿನಗಳಲ್ಲಿ ಐಸಿಎಂಆರ್ ಮೊದಲಾದ ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೈಜೋಡಿಸುತ್ತ ಸಾಂಪ್ರದಾಯಿಕ ಔಷಧಗಳ ಸಂಶೋಧನೆಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಶೈಕ್ಷಣಿಕ ಮತ್ತು ಸಂಶೋಧನಾ ನಿರ್ದೇಶಕ ವಿ ರಾಮಮೋಹನ ಗುಪ್ತ ಮಾತನಾಡಿ, ‘ಶಿಕ್ಷಕರು ಸಂಶೋಧನೆ ಕೈಗೊಳ್ಳುತ್ತ ಜ್ಞಾನ ವೃದ್ಧಿಸಿಕೊಳ್ಳಬೇಕು. ಸಂಸ್ಥೆಯಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳ ಸಹಾಯ ಪಡೆದು ಉನ್ನತಮಟ್ಟದ ಸಂಶೋಧನೆ ನಡೆಸಬೇಕು‘ ಎಂದರು.
ನಿರ್ದೇಶಕರಾದ ಪ್ರೊ .ಸಿ ಸುರೇಶಬಾಬು, ಡಾ. ಪಿ ವಿಜಯಕುಮಾರ ಉಪಸ್ಥಿತರಿದ್ದರು. ಡಾ. ಬಂದೇ ನವಾಜ್ ಪರಿಚಯಿಸಿದರು. ಎ. ಎಸ್. ಆನಂದ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸಾನ್ವಿ ಕಟ್ಟಿ ಮತ್ತು ರಿಯಾ ನಿರೂಪಿಸಿದರು. ಆನಂದ ವಂದಿಸಿದರು.
ಕಾರ್ಯಾಗಾರದ ಅಂಗವಾಗಿ ಒಟ್ಟು ಆರು ಗೋಷ್ಠಿಗಳ ನಡೆದವು. ಪ್ರಮಖ ವಿಷಯ ತಜ್ಞರು ವಿಷಯ ಮಂಡಿಸಿದರು.
ಗೆ ಐಸಿಎಂಆರ್ ನಿರ್ದೇಶಕರಾದ ಡಾ. ಸುಬರ್ಣ ರಾಯ್, ನೋಡಲ್ ಅಧಿಕಾರಿ ಡಾ. ಮನೀಶ್‌ಗೆ ಬರುವಾಲಿಯ ಮತ್ತು ಐಸಿಎಂಆರ್‌ನ ಐಸಿಎಂಆರ್ ವಿಜ್ಞಾನಿ ಅತ್ಯುಲ್ಲಾ ಅಜಿತ್ ಚರ್ಚೆ ನಡೆಸಿ ಕೊಟ್ಟರು.
ಕಾರ್ಯಗಾರದಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ಎನ್ಇಟಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ದೊಡ್ಡಯ್ಯ, ನವೋದಯ ದಂತ ಮಹಾವಿದ್ಯಾಲಯದ ಡಾ. ಗಿರೀಶ್ ಕಟ್ಟಿ, ನವೋದಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಹೆಜಟಿ ಸುಧಾನ ಕುಮಾರಿ ಮತ್ತು ನವೋದಯ ಫಿಸಿಯೋಥೆರಪಿ ಕಾಲೇಜಿನ ಡಾ. ಕೌಶಿಕ್ ರೆಡ್ಡಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.