ADVERTISEMENT

ರಾಯಚೂರು: ಕೃಷ್ಣಾನದಿ ಪ್ರವಾಹ, ಶೀಲಹಳ್ಳಿ ಸೇತುವೆ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 7:52 IST
Last Updated 23 ಜುಲೈ 2021, 7:52 IST
ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆ ಶೀಲಹಳ್ಳಿ ಸಂಪರ್ಕಿಸುವ ಸೇತುವೆ ಶುಕ್ರವಾರ ಮುಳುಗಡೆಯಾಗಿದೆ.
ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆ ಶೀಲಹಳ್ಳಿ ಸಂಪರ್ಕಿಸುವ ಸೇತುವೆ ಶುಕ್ರವಾರ ಮುಳುಗಡೆಯಾಗಿದೆ.   

ರಾಯಚೂರು: ನಾರಾಯಪುರ ಜಲಾಶಯದಿಂದ ಕೃಷ್ಣಾನದಿಗೆ ಹೊರಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆ ಶೀಲಹಳ್ಳಿ ಸಂಪರ್ಕಿಸುವ ಸೇತುವೆಯು ಶುಕ್ರವಾರ ಮುಳುಗಡೆಯಾಗಿದೆ.

ಬೆಳಿಗ್ಗೆ 11 ಗಂಟೆಗೆ 29 ಕ್ರೆಸ್ಟ್ ಗೇಟುಗಳಿಂದ 1.98 ಲಕ್ಷ‌ ಕ್ಯುಸೆಕ್ ನೀರು ಹೊರ ಬಿಡುತ್ತಿದ್ದು, ಸಂಜೆಯವರೆಗೂ 2.5 ಲಕ್ಷ ‌ಕ್ಯುಸೆಕ್ ಗೆ ಹೆಚ್ಚಿಸಲಾಗುವುದು ಎಂದು ಜಲಾಶಯ ನಿರ್ವಹಣೆ ಎಂಜಿನಿಯರುಗಳು ‌ಮುನ್ನಚ್ಚರಿಕೆ ನೀಡಿದ್ದಾರೆ.

ನದಿಪಾತ್ರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತವು ಈಗಾಗಲೇ ದೇವದುರ್ಗ, ಲಿಂಗಸುಗೂರು ಹಾಗೂ ರಾಯಚೂರು ತಾಲ್ಲೂಕು ಆಡಳಿತಗಳಿಗೆ ಸೂಚಿಸಿದೆ.

ADVERTISEMENT

ಪ್ರವಾಹವು 3 ಲಕ್ಷ ಕ್ಯುಸೆಕ್ ಮೀರಿದರೆ ದೇದುರ್ಗ ಪಕ್ಕದ ಹೂವಿನಹೆಡಗಿ ಸೇತುವೆ ಮುಳುಗಡೆ ಆಗುತ್ತದೆ. ಇದರಿಂದ ಕಲಬುರ್ಗಿ- ರಾಯಚೂರು ಸಂಪರ್ಕದ ಒಂದು ಮಾರ್ಗ ಸ್ಥಗಿತವಾಗೊಂಡು, ಸುತ್ತುವರೆದು ಸಂಚರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.