
ಪ್ರಜಾವಾಣಿ ವಾರ್ತೆ
ಸಿಂಧನೂರು: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಕಾರಣದಿಂದ ರದ್ದಾಗಿದ್ದ ವಿಮಾನ ಸೇವೆ ಪ್ರಾರಂಭವಾಗುವ ಸೂಚನೆ ಲಭಿಸಿದ್ದು, ಇಲ್ಲಿನ ಮಕ್ಕಳ ವೈದ್ಯ ಡಾ.ಕೆ.ಶಿವರಾಜ ಮತ್ತು ಅವರ ಕುಟುಂಬ ಈಗ ನಿರಾಳವಾಗಿದೆ.
ಮಂಗಳವಾರ ರಾತ್ರಿ 9ಕ್ಕೆ ದುಬೈಯಿಂದ ವಿಮಾನ ನಿರ್ಗಮಿಸಲಿದ್ದು, ಮಾರ್ಚ್ 4ರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಬರುವುದಾಗಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.