ADVERTISEMENT

ಮುದಗಲ್: ವಸತಿ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರದ ಕುರಿತು ತನಿಖೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:28 IST
Last Updated 7 ಮೇ 2025, 14:28 IST
ಮುದಗಲ್ ಸಮೀಪದ ಉಪ್ಪಾರ ನಂದಿಹಾಳ ಗ್ರಾಮ ಪಂಚಾಯಿತಿಯಲ್ಲಿ ಬಸವ ವಸತಿ ನಿಗಮದ ತನಿಖಾ ತಂಡ ದಾಖಲೆಗಳನ್ನು ಪರಿಶೀಲಿಸಿತು
ಮುದಗಲ್ ಸಮೀಪದ ಉಪ್ಪಾರ ನಂದಿಹಾಳ ಗ್ರಾಮ ಪಂಚಾಯಿತಿಯಲ್ಲಿ ಬಸವ ವಸತಿ ನಿಗಮದ ತನಿಖಾ ತಂಡ ದಾಖಲೆಗಳನ್ನು ಪರಿಶೀಲಿಸಿತು   

ಮುದಗಲ್: ಸಮೀಪದ ಉಪ್ಪಾರ ನಂದಿಹಾಳ ಗ್ರಾಮ ಪಂಚಾಯಿತಿಯಲ್ಲಿ 2021-22ನೇ ಸಾಲಿನ ಬಸವ ವಸತಿ ಮನೆಗಳು ಹಂಚಿಕೆಯಲ್ಲಿ ಅವ್ಯವಹಾರದ ಕುರಿತು ಬಸವ ವಸತಿ ನಿಗಮದ ತನಿಖಾ ಅಧಿಕಾರಿಗಳು ಲಕ್ಕಿಹಾಳ ಗ್ರಾಮದಲ್ಲಿ ತನಿಖೆ ಮಾಡಿದರು.

ಚಿಕ್ಕ ಲೆಕ್ಕಿಹಾಳ ಹಾಗೂ ಹಿರೇ ಲೆಕ್ಕಿಹಾಳ ಗ್ರಾಮಗಳಲ್ಲಿ ಗ್ರಾಮ ಸಭೆ ನಡೆಸದೇ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಮನೆಗಳ ಹಂಚಿಕೆಯಲ್ಲಿ ಅವ್ಯವಹಾರವಾಗಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಬಸನಗೌಡ ಮತ್ತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ ಅವರು ತನಿಖಾಧಿಕಾರಿಗಳಾಗಿ ಆಗಮಿಸಿ, ವಸತಿ ಯೋಜನೆಯ ಕಡತಗಳನ್ನು ಪರಿಶೀಲಿಸಿದರು.

‘ನಿಷ್ಪಕ್ಷಪಾತವಾಗಿ ತನಿಖೆ ಮಾಡಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ರೇಣುಕಮ್ಮ ಹನುಮಂತ, ಗದ್ದೆಪ್ಪ ಅಯ್ಯಪ್ಪ, ಹನುಮಂತ ಗುರಿಕಾರ, ಗದ್ದೆಪ್ಪ ಗಡ್ಡಿ ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.