ADVERTISEMENT

ಡಿಕೆಶಿಗೆ ಹುಚ್ಚು ಹಿಡಿದಿದೆ, ಅವರಿಗೆ ಎಲ್ಲವೂ ಹುಚ್ಚಾಗಿ ಕಾಣುತ್ತವೆ: ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 9:40 IST
Last Updated 19 ನವೆಂಬರ್ 2021, 9:40 IST
ಅರಗ ಜ್ಞಾನೇಂದ್ರ
ಅರಗ ಜ್ಞಾನೇಂದ್ರ    

ಸಿರವಾರ (ರಾಯಚೂರು): 'ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೇ ಹುಚ್ಚು ಹಿಡಿದಿದೆ. ಹುಚ್ಚು ಹಿಡಿದವರಿಗೆ ಎಲ್ಲವೂ ಹುಚ್ಚಾಗಿ ಕಾಣುತ್ತದೆ' ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪ್ರತಿಟೀಕೆ ಮಾಡಿದರು.

ಸಿರವಾರ ಪಟ್ಟಣದ ಚುಕ್ಕಿ ಸಭಾಂಗಣದಲ್ಲಿ ಬಿಜೆಪಿಯಿಂದ ಶುಕ್ರವಾರ ಏರ್ಪಡಿಸಿದ್ದ 'ಜನಸ್ವರಾಜ್ ಸಮಾವೇಶ'ದಲ್ಲಿ ಮಾತನಾಡಿದರು.
'ಅವರು ರಾಜಕೀಯಕ್ಕೆ ಹೇಗೆ ಬಂದಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ರೌಡಿ ಶೀಟರ್ ರಾಮಚಂದ್ರ ಕೊತ್ವಾಲ್ ಜೊತೆ ಸೇರಿ ಡಿ.ಕೆ.ಶಿವಕುಮಾರ್ ರಾಜಕೀಯ ಆರಂಭಿಸಿದ್ದಾರೆ. ಆದರೆ ನಾನು ಬಡವರ ಜೊತೆಯಲ್ಲಿ ಬೆಳೆದು, ಸಿದ್ಧಾಂತದ ಮೂಲಕ ರಾಜಕೀಯಕ್ಕೆ ಬಂದಿದ್ದೇನೆ' ಎಂದರು.

'ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಸ್ತಾಪಿಸುತ್ತಿದ್ದಾರೆ. ಶ್ರೀಕಿ ಬಂಧನ ಮಾಡಿದರೆ ಕಾಂಗ್ರೆಸ್ ವಿನಾಕಾರಣ ಆರೋಪ ಶುರು ಮಾಡಿದ್ದಾರೆ. 2018 ರಲ್ಲಿ ಶ್ರೀಕಿಯನ್ನು ಏಕೆ ಬಂದಸಲಿಲ್ಲ' ಎಂದು ಕೇಳಿದರು.

'ಜನಪರ ಕಾಯ್ದೆಗಳು ವಿಧಾನಸಭೆಯಲ್ಲಿ ಪಾಸಾಗುತ್ತವೆ. ಆದರೆ ಪರಿಷತ್ ನಲ್ಲಿ ಬಿಜೆಪಿ ಗೆ ಬಹುಮತವಿಲ್ಲ. ಜನಪರ ಕಾಯ್ದೆಗಳು ಜಾರಿ ಆಗುವುದಕ್ಕೆ ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯರು ಅವಕಾಶ ಮಾಡಬೇಕು. ಜಾತಿ, ಹಣ ನಗಣ್ಯ. ಬಿಜೆಪಿ ಸಿದ್ಧಾಂತವನ್ನು ನೋಡಿಕೊಂಡು ಮತ ನೀಡಬೇಕು. ನರೇಂದ್ರ ಮೋದಿ ಅವರ ನಾಯಕತ್ವದಿಂದ ದೇಶ ಬದಲಾಗಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.