
ದೇವದುರ್ಗ: ಅರಕೇರಾ ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಹಿರೇಗುಡದಯ್ಯ (ಆಂಜನೇಯ ದೇವಸ್ಥಾನ) ದೇವಸ್ಥಾನದ ಮುಂದೆ ಹಾಲುಗಂಬ ಉತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ವಿಶಿಷ್ಟವಾಗಿ ನಡೆಯುವ ಉತ್ಸವ ನೋಡಲು ಸಾವಿರಾರು ಜನ ಸೇರಿದ್ದರು.
ಒಂದು ಗಂಟೆಗೂ ಅಧಿಕ ಸಮಯ ಹಾಲುಗಂಬ ಉತ್ಸವ ಸ್ಪರ್ಧೆ ನಡೆಯಿತು. ಒಬ್ಬರ ಮೇಲೆ ಒಬ್ಬರು ಹಾಲುಗಂಬ ಹತ್ತುತ್ತಾ ಕೆಳಗೆ ಜಾರಿ ಬೀಳುವ ದೃಶ್ಯಗಳನ್ನು ಕಂಡು ನೆರೆದಿದ್ದ ಯುವಕರು ಶಿಳ್ಳೆ ಚಪ್ಪಾಳೆಗಳ ಮೂಲಕ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಿದ್ದರು.
ಬೃಹತ್ ಕಂಬಕ್ಕೆ ಜಿಡ್ಡು ತರುವ ಹಾಗೂ ಹೈನು ಪದಾರ್ಥಗಳನ್ನು ಲೇಪಿಸಿದ್ದು ಕಂಬ ಮೇಲೆ ಕುಳಿತ ವ್ಯಕ್ತಿಯೊಬ್ಬರು ಹಾಲು, ಮೊಸರು ಕಂಬಕ್ಕೆ ಸುರಿದಾಗ ಕಂಬದ ತುದಿ ತಲುಪಿದಾಗ ಗೊಲ್ಲ ಸಮುದಾಯದ ಯುವಕರು ಹರಸಾಹಸ ಮಾಡಿ ಕೊನೆಗೆ ಜಾರಿ ಕೆಳಗೆ ಬೀಳುತ್ತಿರುವುದನ್ನು ಕಂಡು ನೆರೆದ ಜನ ನಗೆಗಡಲಲ್ಲಿ ತೇಲಿದರು. ಹಗ್ಗದ ಸಹಾಯ ಪಡೆದು ಕಂಬ ಏರಿದರು.
ಅರಕೇರಾ, ದೇವದುರ್ಗ ಮತ್ತು ಸಿರವಾರ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.