ADVERTISEMENT

ರಾಯಚೂರು: ಯೋಜನೆಗಳ ಮಾಹಿತಿಗಾಗಿ ಏಕೀಕೃತ ಸಹಾಯವಾಣಿ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 14:16 IST
Last Updated 18 ಜುಲೈ 2024, 14:16 IST

ರಾಯಚೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯಡಿ ಮಾಹಿತಿಗಾಗಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ಏಕೀಕೃತ ಸಹಾಯವಾಣಿ 8277506000 ‍ಪ್ರಾರಂಭಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯಡಿ ಪರಿಹಾರ ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಾರ್ವಜನಿಕರು ಒಂದೇ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಮತ್ತು ಕುಂದುಕೊರತೆ ನಿವಾರಣೆಗಾಗಿ ವಿಭಿನ್ನ ಸಹಾಯವಾಣಿಗಳನ್ನು ಸಂಪರ್ಕಿಸುವುದು ಕಷ್ಟವಾಗುತ್ತಿದೆ. ಈಗಿರುವ ಎರಡು ಸಹಾಯವಾಣಿಯನ್ನು ರದ್ದುಗೊಳಿಸಿ ಏಕೀಕೃತ ಸಹಾಯವಾಣಿ ಮುಂದುವರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಪಾಂಡ್ವೆ ತಿಳಿಸಿದ್ದಾರೆ.

ರೈಲ್ವೆ ಸಾಮಾನ್ಯ ಕೋಚ್ ಅಳವಡಿಕೆಗೆ ಮನವಿ

ರಾಯಚೂರು: ಮುಂಬೈ–ತಿರುಪತಿ ಮತ್ತು ಬೆಂಗಳೂರು ಉದ್ಯಾನ ಎಕ್ಸ್‌ಪ್ರೆಸ್ ಮತ್ತು ನಾಂದೇಡ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ಯಾಂಟ್ರಿ ಕಾರ್ ವ್ಯವಸ್ಥೆ ಮಾಡಬೇಕು. ಸಾಮಾನ್ಯ ಕೋಚ್‌ಗಳನ್ನು ಅಳವಡಿಸಬೇಕು ಎಂದು ದಕ್ಷಿಣ ಮಧ್ಯ ರೈಲ್ವೆ ಮುಖ್ಯ ವಾಣಿಜ್ಯ ನಿರೀಕ್ಷಕರಿಗೆ ಹಾಗೂ ಸ್ಟೇಷನ್ ಮ್ಯಾನೇಜರ್‌ ಅಶೋಕ ಮೀನಾ, ಎಸ್‌ಸಿಐ ಜೆ.ಟಿ.ಹೇಮರಾಜ್ ಅವರಿಗೆ ರೈಲ್ವೆ ಸಲಹಾ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ADVERTISEMENT

ರಿಸರ್ವೇಶನ್ ಕೌಂಟರ್ ಪಕ್ಕದಲ್ಲಿ ದುರ್ವಾಸನೆ ಬರುತ್ತಿದ್ದು ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಸ್ವಚ್ಛತೆ ಕಾಪಾಡಬೇಕು. ಪ್ರಸ್ತುತ ಫ್ಲಾಟ್ ಫಾರಂ 1ರಲ್ಲಿ ಯಾವುದೇ ಕ್ಯಾಟರಿಂಗ್ ಸ್ಟಾಲ್ ಇಲ್ಲ. ಇದರಿಂದ ಜನರಿಗೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಶೀಘ್ರದಲ್ಲಿ ಸ್ಟಾಲ್ ವ್ಯವಸ್ಥೆ ಮಾಡಬೇಕು. ನಿಲ್ದಾಣದಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ರೈಲ್ವೆ ಸಲಹಾ ಸಮಿತಿ ಸದಸ್ಯರಾದ  ಎಂ.ಮಾರಪ್ಪ, ಎ.ಚಂದ್ರಶೇಖರ, ಮಹೇಶ, ರಮೇಶ ಭಾಗ್ರಾಚ್, ಸಿದ್ದಲಿಂಗಯ್ಯ ಸ್ವಾಮಿ, ಸೀತಾ ನಾಯಕ, ಅಪರಾಜುದ್ದೀನ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.