
ಪ್ರಜಾವಾಣಿ ವಾರ್ತೆ
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿನ ಹುಂಡಿ ತೆರೆದು ಸೋಮವಾರ ಮಠದ ಸಿಬ್ಬಂದಿ ಕಾಣಿಕೆ ಎಣಿಕೆ ಮಾಡಿದರು
ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿನ ಹುಂಡಿ ತೆರೆದು ಸೋಮವಾರ ನಗದು ಎಣಿಕೆ ಮಾಡಲಾಗಿದ್ದು, 20 ದಿನಗಳ ಅವಧಿಯಲ್ಲಿ ₹3,73,66,587 ಕಾಣಿಕೆ ಸಂಗ್ರಹವಾಗಿದೆ.
₹3,62,69,247 ನಗದು, ₹10,97,340 ಮೊತ್ತದ ನಾಣ್ಯಗಳು ಸೇರಿ ₹.3,73,66,587 ನಗದು, 87 ಗ್ರಾಂ ಚಿನ್ನ ಹಾಗೂ, 910 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.