ADVERTISEMENT

ರಾಯಚೂರು | ಮಾರುಕಟ್ಟೆ ವಿಶ್ಲೇಷಣೆ: ತರಕಾರಿ ಬೆಲೆಯಲ್ಲಿ ಸ್ಥಿರ

ಡೊಣಮೆಣಸಿನಕಾಯಿ ದರ ಪತ್ರಿ ಕೆಜಿಗೆ ₹ 80

ಚಂದ್ರಕಾಂತ ಮಸಾನಿ
Published 25 ಮಾರ್ಚ್ 2024, 5:38 IST
Last Updated 25 ಮಾರ್ಚ್ 2024, 5:38 IST
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದು
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದು   

ರಾಯಚೂರು: ಜಿಲ್ಲೆಯಲ್ಲಿ ರಣ ಬಿಸಿಲು ಆವರಿಸಿದೆ. ಗ್ರಾಹಕರು ಬಹುಬೇಗ ಬಾಡುವ ತರಕಾರಿಯನ್ನು ಒಂದು ಅವಧಿಗೆ ಮಾಡುವಷ್ಟು ಮಾತ್ರ ಖರೀದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ತರಕಾರಿ ಬರುತ್ತಿಲ್ಲ. ಹೊರ ಜಿಲ್ಲೆಗಳ ತರಕಾರಿಯೇ ಮಾರುಕಟ್ಟೆಗೆ ಬರುತ್ತಿದೆ.

ಬೀನ್ಸ್, ಹೂಕೋಸು, ಚವಳೆಕಾಯಿ, ಅವರೆಕಾಯಿ, ಬಟಾಣಿ ಬೆಲೆ ಹೆಚ್ಚಾಗಿದೆ. ಈರುಳ್ಳಿ , ಬೆಳ್ಳುಳ್ಳಿ, ‌ಆಲೂಗಡ್ಡೆ, ಹಿರೇಕಾಯಿ, ಸೌತೆಕಾಯಿ, ಹಾಗಲಕಾಯಿ, ಬೆಂಡೆಕಾಯಿ, ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ ಬೆಲೆ ಸ್ಥಿರವಾಗಿದೆ.

ಮೆಣಸಿನಕಾಯಿ, ಎಲೆಕೋಸು, ಗಜ್ಜರಿ, ಬೀನ್ಸ್ , ಟೊಮೆಟೊ, ಬದನೆಕಾಯಿ, ತೊಂಡೆಕಾಯಿ, ಕುಂಬಳಕಾಯಿ, ಸೋರೆಕಾಯಿ, ಬಟಾಣಿ, ನುಗ್ಗೆಕಾಯಿ ಬೆಲೆ ಕಡಿಮೆಯಾಗಿದೆ. ಸಬ್ಬಸಗಿ, ಮೆಂತೆ, ಕೊತಂಬರಿ, ಪಾಲಕ ಇತ್ಯಾದಿ ಸೊಪ್ಪಿನ ಬೆಲೆಯೂ ಇಳಿದಿದೆ.

ADVERTISEMENT

ನೆರೆಯ ಆಂಧ್ರಪ್ರದೇಶ, ತೆಲಂಗಾಣದ ಜಿಲ್ಲೆಗಳಿಂದ ಹಿರೇಕಾಯಿ, ಗಜ್ಜರಿ, ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಹಾಗೂ ಸೊ‍ಪ್ಪು, ಮಹಾರಾಷ್ಟ್ರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ ಸೊಪ್ಪು, ಈರುಳ್ಳಿ ಸೊಪ್ಪು ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.

ಬೆಳಿಗ್ಗೆ 9 ಗಂಟೆ ವೇಳೆಗೆ ಪ್ರಖರ ಬಿಸಿಲು ಬೀಳುತ್ತಿದೆ. ಹೀಗಾಗಿ ಗ್ರಾಹಕರು ಬೆಳಗಿನ ವೇಳೆಯಲ್ಲೇ ಮಾರುಕಟ್ಟೆಗೆ ತರಕಾರಿ ಸೊಪ್ಪು ಖರೀದಿಸುತ್ತಿದ್ದಾರೆ. ಬಡಾವಣೆಗಳ ಮಾರುಕಟ್ಟೆಯಲ್ಲೂ ಬೆಳಗಿನ ವೇಳೆಯಲ್ಲೇ ಖರೀದಿ ನಡೆಯುತ್ತಿದೆ.

‘ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಸೊಪ್ಪು ಬರುತ್ತಿದೆ. ಅಲ್ಪ ಪ್ರಮಾಣದಲ್ಲಿ ಬಂದರೂ ಒಂದು ಗಂಟೆಯಲೇ ಖಾಲಿಯಾಗುತ್ತಿದೆ. ಬಿಸಿಲಿನ ಕಾರಣ ಸೌತೆಗೆ ಹೆಚ್ಚಿನ ಬೇಡಿಕೆ ಬಂದಿದೆ’ ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.

ತರಕಾರಿ (ಪ್ರತಿ ಕೆ.ಜಿ) ಕಳೆದ ವಾರ– ಈ ವಾರ

(ರೂಪಾಯಿಗಳಲ್ಲಿ)

ಈರುಳ್ಳಿ – 18–20
ಬೆಳ್ಳುಳ್ಳಿ– 25–25

‌ಆಲೂಗಡ್ಡೆ–25–25
ಮೆಣಸಿನಕಾಯಿ –60–40

ಎಲೆಕೋಸು –40–30
ಹೂಕೋಸು –35–40
ಗಜ್ಜರಿ – 60–40

ಬೀಟ್‌ರೂಟ್‌ –40–40
ಬೀನ್ಸ್  50–60
ಟೊಮೆಟೊ 15–20
ಬದನೆಕಾಯಿ 30–20

ಹಿರೇಕಾಯಿ –60–60
ಬೆಂಡೆಕಾಯಿ –40–40
ತೊಂಡೆಕಾಯಿ –40–30
ಡೊಣಮೆಣಸಿನಕಾಯಿ 80–80

ತುಪ್ಪದ ಹಿರೇಕಾಯಿ 80–80
ಚವಳೆಕಾಯಿ – 50–60

ಕುಂಬಳಕಾಯಿ 80–60

ಸೋರೆಕಾಯಿ 30–20

ಬಟಾಣಿ– 70–60

ಸೌತೆಕಾಯಿ – 40–40

ಹಾಗಲಕಾಯಿ–80–80

ಅವರೆಕಾಯಿ–60–80

ನುಗ್ಗೆಕಾಯಿ 80–40

ಸೊಪ್ಪು– ಒಂದು ಸಿವುಡಿಗೆ ಬೆಲೆ

ಸಬ್ಬಸಗಿ–20–10

ಮೆಂತೆ– 20–20

ಕೊತಂಬರಿ–20–20

ಪಾಲಕ–10–10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.