ADVERTISEMENT

ಮಸ್ಕಿ | ‘ಮಂಗ್ಲಿ’ ಕನ್ನಡ ಹಾಡು: ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 15:59 IST
Last Updated 13 ಏಪ್ರಿಲ್ 2021, 15:59 IST
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ತೆಲುಗು ಹಿನ್ನೆಲೆ ಗಾಯಕಿ ಮಂಗ್ಲಿ ಅವರು ಮಂಗಳವಾರ ಪ್ರಚಾರ ನಡೆಸಿದರು.
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ತೆಲುಗು ಹಿನ್ನೆಲೆ ಗಾಯಕಿ ಮಂಗ್ಲಿ ಅವರು ಮಂಗಳವಾರ ಪ್ರಚಾರ ನಡೆಸಿದರು.    

ಮಸ್ಕಿ (ರಾಯಚೂರು): ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರಕ್ಕೆ ಬಂದಿರುವ ತೆಲುಗು ಹಿನ್ನೆಲೆ ಗಾಯಕಿ ಮಂಗ್ಲಿ (ಸತ್ಯವತಿ) ಅಡವಿಬಾವಿ ತಾಂಡಾದಲ್ಲಿ ‘ಕಣ್ಣ ಹೊಡಿಯಾಕ್..’ ಹಾಡು ಹಾಡಿ‌ ರಂಜಿಸಿದರು.

‘ಕನ್ನಡ ಸ್ವಲ್ಪ ಮಾತನಾಡಲು ಬರತ್ತೆ’ ಎಂದರು.

‘ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಕನ್ನಡದಲ್ಲಿ ಹೇಳಿದ್ದಕ್ಕೆ ಯುವಕರು ಶಿಳ್ಳೆ ಹೊಡೆದರು. ಕಲಬುರ್ಗಿ ಸಂಸದ ಉಮೇಶ ಜಾಧವ ವೇದಿಕೆಯಲ್ಲಿದ್ದರು.

ADVERTISEMENT

‘ಮಂಗ್ಲಿ’ ವಿಡಿಯೋ ಸೆರೆಹಿಡಿಯಲು ಪೈಪೋಟಿ
ಮಸ್ಕಿ (ರಾಯಚೂರು):
ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿರುವ ತೆಲುಗು ಚಲನಚಿತ್ರ ಹಿನ್ನೆಲೆ ಗಾಯಕಿ ಅಡವಿಭಾವಿ ತಾಂಡಾದಲ್ಲಿ ಮತಯಾಚಿಸಿದರು.

ಕಿಕ್ಕಿರುದು ನೆರೆದಿದ್ದ ಯುವಜನರು ಹಾಡು ಹಾಡಲು ಒತ್ತಾಯಿಸಿದರು. 'ಕಣ್ಣೆ ಅದಿರಿಂದಿ..' ಎಂದು‌ ತೆಲುಗು ಭಾಷೆಯಲ್ಲಿ ಮಂಗ್ಲಿ ಹಾಡಿದರು. ಆನಂತರ ಕನ್ನಡದಲ್ಲಿ 'ಕಣ್ಣು ಹೊಡೆಯಾಕ್...' ಹಾಡು ಹಾಡಿದರು.

ನೆರೆದಿದ್ದ ಜನರೆಲ್ಲರ ಕೈಯಲ್ಲಿ ಮೊಬೈಲ್ ತೆರೆದುಕೊಂಡಿತ್ತು. ಎಲ್ಲರೂ ವಿಡಿಯೋ ಗ್ರಾಫರ್‌ಗಳಾಗಿದ್ದರು.

ಮೊಬೈಲ್ ನಲ್ಲಿ ವಿಡಿಯೋ‌ ಸೆರೆಹಿಡಿದು ಮತ್ತೆ ಮತ್ತೆ ನೋಡಿಕೊಳ್ಳಲು ಕಾತರರಾಗಿದ್ದರು. ಹಾಡಿಗೆ ಹೆಜ್ಜೆ ಹಾಕಿ ಮೋಜು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.